ಮೈಸೂರು: ದಸರಾ ಪ್ರಯುಕ್ತ ಇಲ್ಲಿನ ರಿಂಗ್ ರಸ್ತೆ ಸಮೀಪದ ಜಿಆರ್‌ಎಸ್ ಸ್ನೋ ಪಾರ್ಕ್‌ನಲ್ಲಿ ಮಂಜಿನಿಂದ ಅಂಬಾರಿ ಹೊತ್ತ ಆನೆಯ ಪ್ರತಿಮೆಯನ್ನು ನಿರ್ಮಿಸಲಾಗಿದ್ದು, ಅ.12ರವರೆಗೆ ಪ್ರದರ್ಶನ ಆಯೋಜಿಸಲಾಗಿದೆ.
ದಸರಾಗೆ ಆಗಮಿಸಿರುವ ಮಾವುತರು ಹಾಗೂ ಕುಟುಂಬದವರಿಂದ ಪ್ರತಿಮೆಯನ್ನು ಉದ್ಘಾಟಿಸಲಾಯಿತು. 15 ಅಡಿ ಎತ್ತರದ ಈ ಪ್ರತಿಮೆಯ ‘ಸ್ನೋ ಅಂಬಾರಿ’ ಯನ್ನು ದಸರಾ ಕಲಾವಿದ ರಮೇಶ್ ಹಾಗೂ ಆನೆಯ ಶಿಲ್ಪವನ್ನು ಕಲಾವಿದ ಮುರಳಿ ಅವರು 10 ದಿನಗಳ ಅವಧಿಯಲ್ಲಿ ನಿರ್ಮಿಸಿದ್ದಾರೆ.
‘ಸ್ನೋ ಪಾರ್ಕ್‌ಗೆ ಆಗಮಿಸುವವರಿಗೆ ದಸರಾ ಭಾಗವಾಗಿ ವಿಶೇಷ ಅನುಭವ ನೀಡುವುದು ನಮ್ಮ ಉದ್ದೇಶ. ಮಾವುತರಿಂದ ಉದ್ಘಾಟಿಸಿದ್ದು ಸಂಭ್ರಮ ತಂದಿದೆ. ಜನರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಂಭ್ರಮದ ಭಾಗವಾಗಬೇಕು. ಆನ್‌ಲೈನ್ ಹಾಗೂ ಆಫ್‌ಲೈನ್‌ನಲ್ಲೂ ಟಿಕಟ್ ಪಡೆಯಬಹುದು’ ಎಂದು ಜಿಆರ್‌ಎಸ್ ಫ್ಯಾಂಟಸಿ ಪಾರ್ಕ್ ನಿರ್ದೇಶಕ ಅಶ್ವಿನ್ ಡಾಂಗೆ ಪತ್ರಿಕಾ ಹೇಳಿಕೆಯಲ್ಲಿ ತಿಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.