ADVERTISEMENT

ಮೈಸೂರು ದಸರಾ | ಜಂಬೂಸವಾರಿ ವೀಕ್ಷಣೆ: ವಿದೇಶಿಯರಿಗೆ ವ್ಯವಸ್ಥೆ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2022, 13:30 IST
Last Updated 12 ಸೆಪ್ಟೆಂಬರ್ 2022, 13:30 IST
ದಸರಾ ಮೆರವಣಿಗೆ ವೀಕ್ಷಿಸಲು ವಿದೇಶಿ ಪ್ರವಾಸಿಗರಿಗೆ ಕಲ್ಪವೃಕ್ಷ ಟ್ರಸ್‌ನಿಂದ ನೀಡುವ ಉಚಿತ ಪಾಸ್ ಅನ್ನು ಮೇಯರ್ ಶಿವಕುಮಾರ್‌ ಸೋಮವಾರ ಬಿಡುಗಡೆ ಮಾಡಿದರು. ಪಾಲಿಕೆ ನಾಮನಿರ್ದೇಶನ ಸದಸ್ಯೆ ಆಶಾ ಸಿಂಗ್, ಟ್ರಸ್ಟ್‌ನ ಖಜಾಂಚಿ ಪದ್ಮಾ, ಸಂಚಾಲಕರಾದ ಲಕ್ಷ್ಮೀದೇವಿ, ದೇವರಾಜು ಹಾಗೂ ಬೆಟ್ಟೇಗೌಡ ಇದ್ದಾರೆ

ಮೈಸೂರು: ಜಂಬೂಸವಾರಿ ವೀಕ್ಷಣೆಗೆ ವಿದೇಶಿಯರಿಗೆ ಈ ಬಾರಿಯೂ ಉಚಿತವಾಗಿ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಕಲ್ಪವೃಕ್ಷ ಟ್ರಸ್ಟ್‌ ತಿಳಿಸಿದೆ.

‘ಮಹಾನಗರಪಾಲಿಕೆ ಮತ್ತು ಜಿಲ್ಲಾಡಳಿತವು ಟ್ರಸ್ಟ್‌ಗೆ ಸಯ್ಯಾಜಿರಾವ್ ರಸ್ತೆಯ ಆಯುರ್ವೇದ ಕಾಲೇಜಿನ‌ ಮುಂಭಾಗದಲ್ಲಿ ಸ್ಥಳಾವಕಾಶ ಮಾಡಿಕೊಟ್ಟಿದೆ. ಅಲ್ಲಿ ಸಾವಿರಕ್ಕೂ ಹೆಚ್ಚು ವಿದೇಶಿ ಪ್ರವಾಸಿಗರಿಗೆ ಶಾಮಿಯಾನ–ಕುರ್ಚಿ ಹಾಕಿ ವ್ಯವಸ್ಥೆ ಕಲ್ಪಿಸಲಾಗುವುದು. ಉಚಿತವಾಗಿ ಬಿಸ್ಕೆಟ್, ನೀರು–ಉಪಹಾರ ನೀಡಲಾಗುವುದು. ಇಂಗ್ಲಿಷ್ ಮತ್ತು ಸ್ಪ್ಯಾನಿಷ್ ಭಾಷೆಯಲ್ಲಿ ಮೆರವಣಿಗೆಯ ವೀಕ್ಷಕ ವಿವರಣೆ ಕೊಡಲಾಗುವುದು’ ಎಂದು ಟ್ರಸ್ಟ್‌ನ ಸಂಚಾಲಕದೇವರಾಜು ತಿಳಿಸಿದ್ದಾರೆ.

ಹೋಟೆಲ್ ಮಾಲೀಕರು, ಯೋಗ ಕೇಂದ್ರದವರು, ವಿದ್ಯಾಸಂಸ್ಥೆಗಳವರು ಟ್ರಸ್ಟ್‌ನ ಪದಾಧಿಕಾರಿಗಳನ್ನು ಸಂಪರ್ಕಿಸಿ ಪಾಸ್‌ ಪಡೆಯಬಹುದು. ಮಾಹಿತಿಗೆ ಮೊ.ಸಂಖ್ಯೆ: 9164837773 ಸಂಪರ್ಕಿಸಬಹುದು ಎಂದು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.