ADVERTISEMENT

ರಾಜ್ಯ ಮಟ್ಟದ ದಸರಾ ಕ್ರೀಡಾಕೂಟ ಸೆ. 22ರಿಂದ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2025, 19:11 IST
Last Updated 14 ಸೆಪ್ಟೆಂಬರ್ 2025, 19:11 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಆಕರ್ಷಣೆಗಳಲ್ಲಿ ಒಂದಾದ ‘ಸಿ.ಎಂ. ಕಪ್‌’–ರಾಜ್ಯ ಮಟ್ಟದ ದಸರಾ ಕ್ರೀಡಾಕೂಟವು ಸೆ. 22ರಿಂದ 25ರವರೆಗೆ ನಗರದಲ್ಲಿ ನಡೆಯಲಿದೆ.

ಚಾಮುಂಡಿವಿಹಾರ ಕ್ರೀಡಾ ಸಮುಚ್ಛಯದಲ್ಲಿ ಅಥ್ಲೆಟಿಕ್ಸ್, ಈಜು ಹಾಗೂ ವಿವಿಧ ಒಳಾಂಗಣ ಕ್ರೀಡೆಗಳು ನಡೆಯಲಿವೆ. ಜೊತೆಗೆ ಮೈಸೂರು ವಿಶ್ವವಿದ್ಯಾಲಯದ ಸ್ಪೋರ್ಟ್ಸ್‌ ಪೆವಿಲಿಯನ್‌ ಸೇರಿದಂತೆ ವಿವಿಧ ಕ್ರೀಡಾಂಗಣಗಳಲ್ಲೂ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ. ಒಟ್ಟು 27 ಕ್ರೀಡೆಗಳಲ್ಲಿ ಸ್ಪರ್ಧೆಗಳು ನಡೆಯಲಿವೆ.

ADVERTISEMENT

ಪ್ರತಿ ವಿಭಾಗ ಮಟ್ಟದಲ್ಲಿ ಉತ್ತಮ ಸಾಧನೆ ತೋರುವ 900 ಕ್ರೀಡಾಪಟುಗಳಂತೆ ರಾಜ್ಯದ 5 ವಿಭಾಗಗಳಿಂದ 3,500 ಸ್ಪರ್ಧಿಗಳು  ಸೆಣೆಸಲಿದ್ದಾರೆ. 22ರಂದು ಸಂಜೆ 5.30ಕ್ಕೆ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ರೀಡಾಕೂಟಕ್ಕೆ ಚಾಲನೆ ನೀಡಲಿದ್ದಾರೆ.

ಕುಸ್ತಿ 22ರಿಂದ: ಸೆ. 22ರಿಂದ 28ರವರೆಗೆ ದೊಡ್ಡಕೆರೆ ಮೈದಾನದ ಡಿ. ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ದಸರಾ ಕುಸ್ತಿ ನಡೆಯಲಿದೆ.

ಪ್ರತಿ ದಿನ ಸಂಜೆ 4ರಿಂದ ನಾಡಕುಸ್ತಿ ನಡೆಯಲಿದ್ದು, ಒಟ್ಟು 250 ಜೋಡಿಗಳು ಸೆಣೆಸಲಿವೆ. ಸೆ. 24ರಿಂದ 28ರವರೆಗೆ ‘ದಸರಾ ಕಂಠೀರವ’, ‘ದಸರಾ ಕೇಸರಿ’, ‘ದಸರಾ ಕಿಶೋರ’, ‘ದಸರಾ ಕಿಶೋರಿ’ ಮತ್ತು ‘ದಸರಾ ಕುಮಾರ’ ಸೇರಿದಂತೆ ವಿವಿಧ ಟೈಟಲ್ ಕುಸ್ತಿಗಳು ನಡೆಯಲಿವೆ. 27ರಂದು ಪಂಜ ಕುಸ್ತಿ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.