ನಗರದಲ್ಲಿ ಮಾದಕವಸ್ತು ತಯಾರಿಕಾ ಘಟಕ ಪತ್ತೆ ಬಳಿಕ ಎಚ್ಚೆತ್ತ ನಗರ ಪೊಲೀಸರು ಭಾನುವಾರ ರಾತ್ರಿ ವಿವಿಧೆಡೆ ದಿಢೀರ್ ಕಾರ್ಯಾಚರಣೆ ನಡೆಸಿದ್ದಾರೆ.
ಮೈಸೂರು: ನಗರದಲ್ಲಿ ಮಾದಕವಸ್ತು ತಯಾರಿಕಾ ಘಟಕ ಪತ್ತೆ ಬಳಿಕ ಎಚ್ಚೆತ್ತ ನಗರ ಪೊಲೀಸರು ಭಾನುವಾರ ರಾತ್ರಿ ವಿವಿಧೆಡೆ ದಿಢೀರ್ ಕಾರ್ಯಾಚರಣೆ ನಡೆಸಿದ್ದಾರೆ.
ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ನೇತೃತ್ವದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಗಾಂಜಾ ಸೇವಿಸಿದ 26 ಜನ ಪತ್ತೆಯಾಗಿದ್ದು ಒಬ್ಬ ಮಾರಾಟಗಾರನನ್ನು ಪತ್ತೆಹಚ್ಚಲಾಗಿದೆ.
ಮಂಡಿ ಮೊಹಲ್ಲಾ, ಉದಯಗಿರಿ, ಎನ್ ಆರ್ ಮೊಹಲ್ಲಾ, ನಜರ್ ಬಾದ್, ಕೆ. ಆರ್ ಮೊಹಲ್ಲಾ ಸೇರಿ ಹಲವು ಕಡೆ ಏಕ ಕಾಲಕ್ಕೆ ಕಾರ್ಯಾಚರಣ ನಡೆಸಿ 59 ಗೋದಾಮು ಪರಿಶೀಲಿಸಲಾಗಿದೆ. ಗಾಂಜಾ ಮಾರಾಟ ಪ್ರಕರಣದ ಹಿನ್ನೆಲೆಯುಳ್ಳ 35 ಜನರನ್ನು ಕರೆಸಿ ವಿಚಾರಣೆ ನಡೆಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.