ಬಂಧನ
(ಸಾಂದರ್ಭಿಕ ಚಿತ್ರ)
ತಿ.ನರಸೀಪುರ (ಮೈಸೂರು ಜಿಲ್ಲೆ): ತಾಲ್ಲೂಕಿನ ಮಾದಾಪುರ ಗ್ರಾಮದ ಜಮೀನಿನ ದನದ ಕೊಟ್ಟಿಗೆಯಲ್ಲಿ ನಕಲಿ ನೋಟು ಮುದ್ರಿಸುತ್ತಿದ್ದ ಇಬ್ಬರನ್ನು ತಿ.ನರಸೀಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಹಿರಿಯೂರು ಗ್ರಾಮದ ನಾಗೇಶ್ (25) ಹಾಗೂ ಅವರ ತಂದೆ ಶಿವಪ್ರಸಾದ್ (48) ಬಂಧಿತ ಆರೋಪಿಗಳು.
ಜಮೀನಿನ ಶೆಡ್‌ನಲ್ಲಿ ನೋಟು ಮುದ್ರಣಕ್ಕೆ ಬಳಸಿದ್ದ ಪ್ರಿಂಟರ್, ಪೆನ್‌ಡ್ರೈವ್, ಬಣ್ಣದ ಬಾಟಲ್‌ಗಳು, ಗಾಂಧೀಜಿ ಭಾವಚಿತ್ರದ ವಾಟರ್ ಮಾರ್ಕ್, ಎ–4 ಕಾಗದಗಳು, ₹ 500 ಬೆಲೆಯ ಒಂದು ಕಡೆ ಪ್ರಿಂಟ್ ಆದ ನೋಟು ಹಾಗೂ ₹ 25,500 ಮೌಲ್ಯದ ₹ 500 ಬೆಲೆಯ 51 ನಕಲಿ ನೋಟುಗಳು ಹಾಗೂ ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ಇನ್‌ಸ್ಪೆಕ್ಟರ್ ಧನಂಜಯ, ಪಿಎಸ್‌ಐ ಜಗದೀಶ್ ಧೂಳಶೆಟ್ಟಿ, ಎಎಸ್‌ಐ ಚಲವರಾಜು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ತಿ.ನರಸೀಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.