ADVERTISEMENT

ಪಿರಿಯಾಪಟ್ಟಣ | ತಂಬಾಕಿಗೆ ಸಿಗದ ಬೆಲೆ: ರೈತ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2026, 18:45 IST
Last Updated 27 ಫೆಬ್ರುವರಿ 2026, 18:45 IST
ಸಿದ್ದೇಗೌಡ (45)
ಸಿದ್ದೇಗೌಡ (45)   

ಪಿರಿಯಾಪಟ್ಟಣ (ಮೈಸೂರು ಜಿಲ್ಲೆ): ತಾಲ್ಲೂಕಿನ ರಾಮನಾಥ ತುಂಗ ಎ.ಜಿ.ಕೊಪ್ಪಲು ಗ್ರಾಮದ ರೈತ ಸಿದ್ದೇಗೌಡ (45) ಕ್ರಿಮಿನಾಶಕ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ತಂಬಾಕಿಗೆ ಸೂಕ್ತ ಬೆಲೆ ಸಿಗದಿರುವುದೇ ಕಾರಣ ಎನ್ನಲಾಗಿದೆ.

ಮೃತರು ತಮ್ಮ ಸಹೋದರ ಸಿದ್ದರಾಮೇಗೌಡ ಮತ್ತು ತಾಯಿ ನಾಗಮ್ಮ ಅವರ ಜಂಟಿ ಖಾತೆಯಲ್ಲಿರುವ ಸರ್ವೇ ನಂ 62/2 ರಲ್ಲಿ 1.3ಎಕರೆ ಜಮೀನಿನಲ್ಲಿ ಹೊಗೆಸೊಪ್ಪು, ಶುಂಠಿ ಬೆಳೆಯುತ್ತಿದ್ದರು. ಜಮೀನನ್ನು ಗುತ್ತಿಗೆ ಪಡೆದು ವ್ಯವಸಾಯ ಮಾಡುತ್ತಿದ್ದು, ವಿವಿಧೆಡೆ ಸಾಲ ಪಡೆದಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ. 

‘ಬೆಳೆಗೆ ಸೂಕ್ತ ಬೆಲೆ ಸಿಗದೆ, ಸಾಲ ತೀರಿಸಲು ಸಾಧ್ಯವಾಗದೆ ಮೃತಪಟ್ಟರು’ ಎಂದು ಪುತ್ರ ಅಪ್ಪು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಪ್ರಕರಣ ದಾಖಲಾಗಿದೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.