ಮೈಸೂರು: ನಗರದಲ್ಲಿ ಗುರುವಾರ ಸುರಿದ ಧಾರಾಕಾರ ಮಳೆಯಿಂದ ಮೈಸೂರು–ಬೆಂಗಳೂರು ರಸ್ತೆಯ ಫೈವ್‌ಲೈಟ್ ವೃತ್ತದ ಸಮೀಪ ಚಲಿಸುತ್ತಿದ್ದ ಆಟೊ ರಿಕ್ಷಾ ಮೇಲೆ ಮರ ಬಿದ್ದು ಚಾಲಕ, ಅಲೀಂ ನಗರದ ನಿವಾಸಿ ಏಜಾಜ್ ಪಾಷಾ (42) ಸ್ಥಳದಲ್ಲೇ ಮೃತಪಟ್ಟರು.
ಪ್ರಯಾಣಿಕರೊಬ್ಬರಿಗೆ ಲಘು ಗಾಯಗಳಾಗಿವೆ.
ಸೇಂಟ್ ಫಿಲೊಮಿನಾ ಚರ್ಚ್ ರಸ್ತೆಯಲ್ಲಿ ಫೈವ್‌ಲೈಟ್ ವೃತ್ತದ ಕಡೆಗೆ ಬರುವಾಗ ಮರವು ಬುಡಸಮೇತ ಉರುಳಿ ಬಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಲಷ್ಕರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.