ADVERTISEMENT

ಮೈಸೂರು | ಪ್ರವಾಸಿಗರಿಗೆ ಸಾಂಪ್ರದಾಯಿಕ ಸ್ವಾಗತ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2025, 4:47 IST
Last Updated 22 ಸೆಪ್ಟೆಂಬರ್ 2025, 4:47 IST
ಮೈಸೂರು ಅರಮನೆ ಆವರಣದಲ್ಲಿ ಜನನಿ ಸೇವಾ ಟ್ರಸ್ಟ್ ವತಿಯಿಂದ ದಸರಾ ಅಂಗವಾಗಿ ಭಾನುವಾರ ಪ್ರವಾಸಿಗರಿಗೆ ಸಾಂಪ್ರದಾಯಿಕ ಸ್ವಾಗತ ನೀಡಲಾಯಿತು– ಪ್ರಜಾವಾಣಿ ಚಿತ್ರ
ಮೈಸೂರು ಅರಮನೆ ಆವರಣದಲ್ಲಿ ಜನನಿ ಸೇವಾ ಟ್ರಸ್ಟ್ ವತಿಯಿಂದ ದಸರಾ ಅಂಗವಾಗಿ ಭಾನುವಾರ ಪ್ರವಾಸಿಗರಿಗೆ ಸಾಂಪ್ರದಾಯಿಕ ಸ್ವಾಗತ ನೀಡಲಾಯಿತು– ಪ್ರಜಾವಾಣಿ ಚಿತ್ರ   

ಮೈಸೂರು: ಮೈಸೂರು ದಸರೆಗೆ ಆಗಮಿಸುವ ದೇಶ- ವಿದೇಶಗಳ ಪ್ರವಾಸಿಗರಿಗೆ ಇಲ್ಲಿನ ಸಂಸ್ಕೃತಿ ತಿಳಿಸಿಕೊಡುವ ಉದ್ದೇಶದಿಂದ ಅಂಬಾವಿಲಾಸ ಅರಮನೆ ಆವರಣದಲ್ಲಿ ಭಾನುವಾರ ಸಾಂಪ್ರದಾಯಿಕ ಸ್ವಾಗತ ನೀಡಲಾಯಿತು.

ಜನನಿ ಸೇವಾ ಟ್ರಸ್ಟ್‌ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪ್ರವಾಸಿಗರಿಗೆ ಮೈಸೂರು ಪೇಟ ತೊಡಿಸಿ ನಂಜನಗೂಡು ರಸಬಾಳೆ, ಮೈಸೂರು ಚಿಗುರು ವೀಳ್ಯೆದೆಲೆ, ಮೈಸೂರು ಪಾಕ್‌, ಮೈಸೂರು ಮಲ್ಲಿಗೆ ಹೂವು ನೀಡಿ, ಮಹಿಳೆಯರಿಗೆ ಬಳೆ ತೊಡಿಸಿ, ಸುಗಂಧದ್ರವ್ಯ ಸಿಂಪಡಿಸಿ, ಆರತಿ ಬೆಳಗಿ ಸ್ವಾಗತಿಸಲಾಯಿತು.

ಕಾಂಗ್ರೆಸ್‌ ನಗರ ಜಿಲ್ಲಾ ಸಮಿತಿಯ ಅಧ್ಯಕ್ಷ ಆರ್‌. ಮೂರ್ತಿ, ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌, ಅಂಬಾರಿ ಆನೆ ‘ಅಭಿಮನ್ಯು’ ಮಾವುತ ವಸಂತ, ಜನನಿ ಸೇವಾ ಟ್ರಸ್ಟ್‌ ಅಧ್ಯಕ್ಷ ಎಂ.ಕೆ. ಅಶೋಕ್, ಉಪಾಧ್ಯಕ್ಷ ಸದಾಶಿವಣ್ಣ, ಪ್ರಧಾನ ಕಾರ್ಯದರ್ಶಿ ಆರ್‌. ಸೌಮ್ಯಾ, ಮುಖಂಡರಾದ ಸಿ.ಎಸ್‌. ರಘು, ದೇವರಾಜ ಮೊಹಲ್ಲಾ ಹರೀಶ್‌ಗೌಡ, ವಿಕ್ರಂ ಅಯ್ಯಂಗಾರ್‌ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.