
ಮೈಸೂರು: ‘ಕಾಡಿನ ಪರಿಸರ ಹಾಗೂ ಪ್ರಾಣಿಗಳನ್ನು ಉಳಿಸುವುದು ನಮ್ಮ ಕರ್ತವ್ಯವಾಗಬೇಕು. ಅವು ಉಳಿದರೆ ನಾವು ಉಳಿಯುತ್ತೇವೆ’ ಎಂದು ಅಂತರರಾಷ್ಟ್ರೀಯ ಲಯನ್ಸ್ ಸಂಸ್ಥೆ ಜಿಲ್ಲೆ 317 ಜಿ ಪ್ರಾಂತ್ಯ 7ರ ಅಧ್ಯಕ್ಷ ಎಚ್.ಸಿ.ಕಾಂತರಾಜು ಹೇಳಿದರು.
ನಗರದ ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾದ ಸಭಾಂಗಣದಲ್ಲಿ ಸಂಸ್ಥೆಯಿಂದ ‘ಬದುಕಿ, ಬದುಕಲು ಬಿಡಿ’ ಘೋಷವಾಕ್ಯದಲ್ಲಿ ಭಾನುವಾರ ಆಯೋಜಿಸಿದ್ದ ಪ್ರಾಂತೀಯ ಸಮ್ಮೇಳನದಲ್ಲಿ ಮಾತನಾಡಿದರು.
‘ಪ್ರಪಂಚದಲ್ಲಿ 13 ದೇಶಗಳಲ್ಲಿ ಮಾತ್ರ ಹುಲಿಗಳಿದ್ದು, ಅದರಲ್ಲಿ ಶೇ 60ರಷ್ಟು ಹುಲಿಗಳು ಭಾರತದಲ್ಲಿಯೇ ಇವೆ. ಹುಲಿಗಳ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ’ ಎಂದರು.
ಗ್ರಾಮೀಣ ಭಾಗದ ಯುವಕರು, ಮಹಿಳೆಯರಿಗೆ ಅನುಕೂಲವಾಗುವಂತೆ ತರಬೇತಿ ಕೇಂದ್ರ ಆರಂಭಿಸಲು ಲಯನ್ಸ್ ಸಂಸ್ಥೆಯ ಹೆಸರಿಗೆ ಪಿರಿಯಾಪಟ್ಟಣದ ಬೇಗೂರು ಗ್ರಾಮದಲ್ಲಿ ಎರಡು ಎಕರೆ ಜಮೀನನ್ನು ಎಂ.ಶಿವಕುಮಾರ್ ಅವರು ದಾನವಾಗಿ ನೀಡಿದರು.
ವನ್ಯಜೀವಿ ಛಾಯಾಗ್ರಾಹಕರಾದ ಕೃಪಾಕರ, ಸೇನಾನಿ ಮಾತನಾಡಿದರು.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಂಗನಾಥ ಮೈಸೂರು ಅವರನ್ನು ಸನ್ಮಾನಿಸಲಾಯಿತು. ಆತಿಥೇಯ ಸಮಿತಿಯ ಸಲಹೆಗಾರ ಎನ್.ಕೃಷ್ಣೇಗೌಡ, ಮೆಂಟರ್‌ಗಳಾದ ಕೆ.ಡಿ.ಕಾರ್ಯಪ್ಪ, ಆರ್.ಡಿ.ಕುಮಾರ್, ಸಹ ಅಧ್ಯಕ್ಷರಾದ ಆರ್.ಎಚ್.ನಾಗರಾಜು, ಜಿ.ವಿ.ಬಾಲು, ಸಂಯೋಜಕರಾದ ಎಲ್.ಶಿವಕುಮಾರ್, ಡಿ.ನಾಗರಾಜ ಆಚಾರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.