ADVERTISEMENT

ಮೈಸೂರು ಮೃಗಾಲಯದ ದೀರ್ಘಾಯುಷಿ ಜಿರಾಫೆ ‘ಯುವರಾಜ’ ಇನ್ನಿಲ್ಲ

​ಪ್ರಜಾವಾಣಿ ವಾರ್ತೆ
Published 29 ಜನವರಿ 2026, 6:38 IST
Last Updated 29 ಜನವರಿ 2026, 6:38 IST
ಯುವರಾಜ 
ಯುವರಾಜ    

ಮೈಸೂರು: ಇಲ್ಲಿನ ಚಾಮರಾಜೇಂದ್ರ ಮೃಗಾಲಯದ ದೀರ್ಘಾಯುಷಿ ಜಿರಾಫೆ ‘ಯುವರಾಜ’ ವೃದ್ಧಾಪ್ಯದ ಕಾರಣ ಬುಧವಾರ ಬೆಳಿಗ್ಗೆ 10.30ಕ್ಕೆ ಮೃತಪಟ್ಟಿತು.

1987ರಲ್ಲಿ ಜರ್ಮನಿ ಮೃಗಾಲಯದಿಂದ ತರಲಾಗಿದ್ದ ಹೆನ್ರಿ ಮತ್ತು ಹನಿ ಜಿರಾಫೆಗಳಿಗೆ 9ನೇ ಮರಿಯಾಗಿ 2001ರ ಡಿ.7ರಂದು ‘ಯುವರಾಜ’ ಜನಿಸಿದ್ದ.  

‘ಯುವರಾಜ ಮೃಗಾಲಯದಲ್ಲಿ ದೀರ್ಘಕಾಲ ಬದುಕಿದ್ದ. ಆತನ ಸಾವಿನಿಂದ ಮೃಗಾಲಯಕ್ಕೆ ತುಂಬಲಾರದ ನಷ್ಟವಾಗಿದೆ’ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕಿ ಪಿ.ಅನುಷಾ ವಿಷಾದಿಸಿದ್ದಾರೆ. 

ADVERTISEMENT

ಗಂಡು ಜಿರಾಫೆಗಳು ಸಾಮಾನ್ಯವಾಗಿ ಅರಣ್ಯದಲ್ಲಿ 15– 20 ವರ್ಷ, ಮೃಗಾಲಯದಲ್ಲಿ 10ರಿಂದ 15 ವರ್ಷ ಬದುಕುತ್ತವೆ. ಮೃಗಾಲಯವು ‘ಯುವರಾಜ’ನ 25ನೇ ಹುಟ್ಟುಹಬ್ಬವನ್ನು 2025ರ ಡಿ.7ರಂದು ಆಚರಿಸಿತ್ತು. ಆರೈಕೆದಾರರಾದ ರಘು, ವಿಘ್ನೇಶ, ಸಚಿನ್‌ ಅವರು ಹುಲ್ಲು, ಹಣ್ಣು, ತರಕಾರಿ–ಕಾಳು ಬಳಸಿ ವಿಶೇಷವಾಗಿ ತಯಾರಿಸಿದ ಕೇಕ್‌ ಅನ್ನು ತಿನ್ನಿಸಿದ್ದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.