ಸಿಂಹಿಣಿ ‘ರಕ್ಷಿತ’
ಮೈಸೂರು: ಇಲ್ಲಿನ ಚಾಮರಾಜೇಂದ್ರ ಮೃಗಾಲಯದಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತಿದ್ದ, ಸಿಂಹಿಣಿ ‘ರಕ್ಷಿತ’ ಶನಿವಾರ ಬೆಳಿಗ್ಗೆ ವಯೋಸಹಜ ಕಾಯಿಲೆಯಿಂದ ಮೃತಪಟ್ಟಿತು. ಅದಕ್ಕೆ 21 ವರ್ಷ 4 ತಿಂಗಳು ವಯಸ್ಸಾಗಿತ್ತು.
ಇದು 2004ರ ಏ.1ರಂದು ಮೃಗಾಲಯದಲ್ಲಿ ನರಸಿಂಹ–ಮಾನಿನಿ ಎಂಬ ಸಿಂಹಗಳಿಗೆ ಜನಿಸಿತ್ತು. ಮೃಗಾಲಯದ ಆಕರ್ಷಣೆಗಳಲ್ಲಿ ಒಂದಾಗಿತ್ತು. ಒಂದು ವಾರದಿಂದ ಚಿಕಿತ್ಸೆ ಪಡೆಯುತ್ತಿತ್ತು ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.