ಮೈಸೂರು: ‘ನಗರದ ಕನ್ನೇಗೌಡನ ಕೊಪ್ಪಲಿನ ಶ್ರೀರಾಮ ಸೇವಾ ಟ್ರಸ್ಟ್ ಮತ್ತು ಶ್ರೀರಾಮ ಮಂದಿರ ಹೊಸಬೀದಿ ಹತ್ತೂ ಜನಗಳ ಗರಡಿಯಿಂದ ಆ.23ರಂದು ಸಂಜೆ 7ಕ್ಕೆ ಗರಡಿ ಆವರಣದಲ್ಲಿ ನಾಡ ಕುಸ್ತಿಯ ಮಟ್ಟಿ ಪೂಜೆ ಆಯೋಜಿಸಲಾಗಿದೆ’ ಎಂದು ಟ್ರಸ್ಟ್‌ನ ಎಲ್.ಚಂದ್ರು ತಿಳಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪೂಜೆಗೆ ಕನ್ನೇಗೌಡನ ಕೊಪ್ಪಲಿನ 6 ಗರಡಿ ಮನೆಗಳು ಸಹಕರಿಸುತ್ತಿವೆ. ಪೂಜೆ ಬಳಿಕ ಒಂದು ಜೋಡಿಯ ಸಾಂಪ್ರದಾಯಿಕ ಕುಸ್ತಿ ನಡೆಯಲಿದೆ’ ಎಂದರು.
ಸುದ್ದಿಗೋಷ್ಠಿಯಲ್ಲಿ ವಿವಿಧ ಗರಡಿಗಳ ಪ್ರಮುಖರಾದ ಚನ್ನಪ್ಪ, ಆರ್. ರಾಜಕುಮಾರ್, ಕೃಷ್ಣಪ್ಪ, ಜಿ.ಶ್ರೀನಿವಾಸ್, ಮಂಜು, ಬಾಲು, ಹರ್ಷ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.