ADVERTISEMENT

ಮೈಸೂರು | ನಾಲ್ವಡಿ ಕೃಷ್ಣರಾಜ ಒಡೆಯರ್‌ ಪ್ರಶಸ್ತಿ ಪ್ರಕಟ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2023, 16:13 IST
Last Updated 31 ಅಕ್ಟೋಬರ್ 2023, 16:13 IST
ನಾಲ್ವಡಿ ಕೃಷ್ಣರಾಜ ಒಡೆಯರ್‌
ನಾಲ್ವಡಿ ಕೃಷ್ಣರಾಜ ಒಡೆಯರ್‌   

ಮೈಸೂರು: ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನೀಡಲಾಗುವ 2023ನೇ ಸಾಲಿನ ‘ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್‌ ಪ್ರಶಸ್ತಿ’ ಪ್ರಕಟಿಸಲಾಗಿದ್ದು, ವಿವಿಧ ಕ್ಷೇತ್ರದ 15 ಸಾಧಕರು ಎರಡು ಸಂಸ್ಥೆಗಳನ್ನು ಆಯ್ಕೆ ಮಾಡಲಾಗಿದೆ.

ಮೈಸೂರಿನ ಡಾ.ಎಸ್. ರಂಗನಾಥಯ್ಯ (ವೈದ್ಯಕೀಯ), ಕೆ.ಪಿ. ನಾಗರಾಜ್‌ (ದೃಶ್ಯ ಮಾಧ್ಯಮ), ಜೆ.ಪಿ. ಬಸವರಾಜು (ಸಾಹಿತಿ/ಪತ್ರಕರ್ತ), ಮಂಡ್ಯದ ಕೀಲಾರ ಕೃಷ್ಣೇಗೌಡ (ಜನಪದ ಗಾಯನ), ಸಿ. ಬಸವಲಿಂಗಯ್ಯ (ರಂಗಭೂಮಿ), ಅಯೂಬ್‌ (ಸಮಾಜಸೇವೆ), ಎಸ್.ತುಕಾರಾಮ್‌ (ಸಾಕ್ಷರತೆ/ಶಿಕ್ಷಣ), ಕೃಪಾಕರ–ಸೇನಾನಿ (‍ಪರಿಸರ), ಎಚ್.ಆರ್. ಲೀಲಾವತಿ (ಸುಗಮ ಸಂಗೀತ), ಯು.ಎಸ್. ಮಹೇಶ್ (ಪ್ರಕಾಶನ), ಚಿಕ್ಕಮಾದು (ಇತಿಹಾಸ), ಮೂಗೂರು ನಂಜುಂಡಸ್ವಾಮಿ (ಕನ್ನಡ ಹೋರಾಟಗಾರ), ಚಾಮರಾಜನಗರದ ಹೊರೆಯಾಲ ದೊರೆಸ್ವಾಮಿ (ಚಳವಳಿ) ಹಾಗೂ ಕೆ.ಬಿ. ರಮೇಶನಾಯಕ (ಪತ್ರಿಕಾ ಮಾಧ್ಯಮ) ಹಾಗೂ ಹಾಸನದ ಕೋಟೆ ನಾಗರಾಜ್‌ (ಸಿನಿಮಾ/ರಂಗಭೂಮಿ) ಅವರನ್ನು ಆಯ್ಕೆ ಮಾಡಲಾಗಿದೆ.

ಸಂಸ್ಥೆಗಳ ವಿಭಾಗದಲ್ಲಿ ಚಾಮರಾಜನಗರದ ಅಮೃತ ಭೂಮಿ (ನೈಸರ್ಗಿಕ ಬೀಜೋತ್ಪಾದನೆ) ಹಾಗೂ ಮೈಸೂರಿನ ಒಡನಾಡಿ ಸೇವಾ ಸಂಸ್ಥೆ (ಸೇವೆ)ಯನ್ನು ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಂ.ಡಿ. ಸುದರ್ಶನ್‌ ತಿಳಿಸಿದ್ದಾರೆ.

ADVERTISEMENT

ಪ್ರೊ.ಹಿ.ಶಿ. ರಾಮಚಂದ್ರೇಗೌಡ, ಪ್ರೊ.ಅರವಿಂದ ಮಾಲಗತ್ತಿ ಹಾಗೂ ಪ್ರೊ.ಸಿ. ನಾಗಣ್ಣ ಆಯ್ಕೆ ಸಮಿತಿಯಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.