
ನಂಜನಗೂಡು: ‘ಯುವಕರು ಚಾಕಚಕ್ಯತೆಯಿಂದ, ರೋಮಾಂಚನಗೊಳಿಸುವ ಡರ್ಟ್ ಟ್ರ್ಯಾಕ್ ಕಾರ್ ರೇಸ್‌ನಲ್ಲಿ ತಮ್ಮ ಅದ್ಭುತ ಪ್ರತಿಭೆಯಿಂದ ಪ್ರೇಕ್ಷಕರ ಮನಗೆದ್ದಿದ್ದಾರೆ. ಈ ರೀತಿಯ ಸಾಹಸ ಕ್ರೀಡೆಗಳಿಗೆ ಪ್ರೋತ್ಸಾಹದ ಅಗತ್ಯವಿದೆ’ ಎಂದು ಸಂಸದ ಸುನೀಲ್ ಬೋಸ್ ಹೇಳಿದರು.
ತಾಲ್ಲೂಕಿನ ಇಮ್ಮಾವು ಕೈಗಾರಿಕಾ ಪ್ರದೇಶದಲ್ಲಿ ಭಾನುವಾರ ನಡೆದ ದಿ.ರಾಕೇಶ್ ಸಿದ್ದರಾಮಯ್ಯ ಸ್ಮರಣಾರ್ಥ ಅರ್ಕೇಶ ಮತ್ತು ಗೆಳೆಯರ ಬಳಗ ಆಯೋಜಿಸಿದ್ದ ಡರ್ಟ್ ಪ್ರಿಕ್ಸ್ ಕಾರ್ ರೇಸ್ ಪಂದ್ಯಾವಳಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಕೇಶ್ ಸಿದ್ದರಾಮಯ್ಯ ಅವರೊಡನೆ ನನಗೆ ಹೆಚ್ಚಿನ ಬಾಂಧವ್ಯವಿತ್ತು. ಅವರ ಜೊತೆಗೂಡಿ ನಮ್ಮ ಜಿಲ್ಲೆಯಲ್ಲಿ ರಾಜಕೀಯ, ಜನಸಂಪರ್ಕ, ಜನಸೇವೆಯ ಪಾಠಗಳನ್ನು ಕಲಿತಿದ್ದೇನೆ. ಅವರು ಬದುಕಿದ್ದರೆ ಜಿಲ್ಲೆಯಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿ ಸಾಧಿಸಬಹುದಿತ್ತು ಎಂದು ಹೇಳಿದರು.
ಕಾಂಗ್ರೆಸ್ ಮುಖಂಡ ಅರ್ಕೇಶ ಮತ್ತು ಬಳಗ ಸ್ಪರ್ಧೆಯನ್ನು ಅಚ್ಚುಕಟ್ಟಾಗಿ ಆಯೋಜಿಸಿದ್ದಾರೆ. ಸ್ಪರ್ಧೆಗಳು ತಮ್ಮ ಪ್ರಾಣದ ಹಂಗು ತೊರೆದು ಪೈಪೋಟಿ ನಡೆಸಿದ್ದಾರೆ. ಸಾಹಸ ಕ್ರೀಡೆಗಳಲ್ಲಿ ಸ್ಪರ್ಧಿಗಳಿಗೆ ಹೆಚ್ಚಿನ ರಕ್ಷಣೆ ಮುಖ್ಯ. ರಾಕೇಶ್ ಸಿದ್ದರಾಮಯ್ಯ ಅವರ ಸ್ಮರಣಾರ್ಥ ಮುಂದಿನ ದಿನಗಳಲ್ಲಿ ಯುವಕರಿಗೆ ಪ್ರೋತ್ಸಾಹ ನೀಡಲು ಹೆಚ್ಚಿನ ಕ್ರೀಡಾಸ್ಪರ್ಧೆಗಳನ್ನು ಆಯೋಜಿಸಲಾಗುವುದು ಎಂದು ಹೇಳಿದರು.
ಕಾಂಗ್ರೆಸ್ ಮುಖಂಡರಾದ ಇಂಧನ್ ಬಾಬು,ಮಾಜಿ ಜಿ.ಪಂ ಸದಸ್ಯ ಚೋಳರಾಜು, ರೈತಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ವಿದ್ಯಾಸಾಗರ್, ಇಮ್ಮಾವು ರಘು, ಅರ್ಕೇಶ್, ದಿನೇಶ್, ಎನ್.ಟಿ.ಗಿರೀಶ್, ದೇವರಾಜು, ಕುಮಾರ್, ರಾಜು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.