ADVERTISEMENT

ನಂಜನಗೂಡು: ಪಡಿತರ ಅಕ್ಕಿ ಕಳ್ಳ ಸಾಗಾಣಿಕೆ

​ಪ್ರಜಾವಾಣಿ ವಾರ್ತೆ
Published 1 ಜುಲೈ 2025, 15:19 IST
Last Updated 1 ಜುಲೈ 2025, 15:19 IST
ನಂಜನಗೂಡಿನ ಚಾಮರಾಜನಗರ ಬೈಪಾಸ್ ರಸ್ತೆಯ ನಾಯಕರ ಸಮುದಾಯ ಭವನದ ಬಳಿ ಸೋಮವಾರ ತಡ ರಾತ್ರಿ ಪಡಿತರ ಅಕ್ಕಿಯನ್ನು ಕಳ್ಳ ಸಾಗಾಣಿಕೆ ಮಾಡುತ್ತಿದ್ದ ಎರಡು ಲಾರಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನಂಜನಗೂಡಿನ ಚಾಮರಾಜನಗರ ಬೈಪಾಸ್ ರಸ್ತೆಯ ನಾಯಕರ ಸಮುದಾಯ ಭವನದ ಬಳಿ ಸೋಮವಾರ ತಡ ರಾತ್ರಿ ಪಡಿತರ ಅಕ್ಕಿಯನ್ನು ಕಳ್ಳ ಸಾಗಾಣಿಕೆ ಮಾಡುತ್ತಿದ್ದ ಎರಡು ಲಾರಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.   

ನಂಜನಗೂಡು: ನಗರದ ಚಾಮರಾಜನಗರ ಬೈಪಾಸ್ ರಸ್ತೆಯ  ಸಮುದಾಯ ಭವನದ ಬಳಿ ಸೋಮವಾರ ತಡ ರಾತ್ರಿ ಪಡಿತರ ಅಕ್ಕಿಯನ್ನು  ಅಕ್ರಮವಾಗಿ ಸಾಗಿಸುತ್ತಿದ್ದ ಎರಡು ಲಾರಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಆಹಾರ ಶಿರಸ್ತೇದಾರ್ ಮಂಜುಳಾ ನೀಡಿದ ದೂರಿಗೆ ಮೇರೆಗೆ  17 ಟನ್ ಅಕ್ಕಿ ಹಾಗೂ  ಅಕ್ಕಿ ಮೂಟೆಗಳನ್ನು ತುಂಬಿ ಆಗುತ್ತಿದ್ದ  ಲಾರಿ ಹಾಗೂ  ಮಿನಿ ಗೂಡ್ಸ್ ವಾಹನಗಳು ಹಾಗೂ ಇಬ್ಬರು ಚಾಲಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

‘ಕಳೆದ ತಿಂಗಳು ಇದೇ ಸ್ಥಳದಲ್ಲಿ ಎರಡು ಲಾರಿಗಳಲ್ಲಿ ಪಡಿತರ ಅಕ್ಕಿ ಸಾಗಿಸುತ್ತಿದ್ದವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು, ಆದರೆ ಪಡಿತರ ಅಕ್ಕಿ ಕಳ್ಳ ಸಾಗಣೆ ನಿಂತಿಲ್ಲ, ಪೊಲೀಸರು ಕಠಿಣ ಕ್ರಮವಹಿಸಬೇಕು’ ಎಂದು ಸಾರ್ವಜನಿಕರು ದೂರಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.