ADVERTISEMENT

22ರಿಂದ ಕಾಲೇಜು ನವರಾತ್ರಿ ರಂಗೋತ್ಸವ

ಬಿ.ವಿ.ಕಾರಂತ ನೆನಪು: 8 ಕಾಲೇಜು, 2 ರಂಗ ಸಂಸ್ಥೆಗಳಿಂದ ನಾಟಕ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2025, 4:55 IST
Last Updated 20 ಸೆಪ್ಟೆಂಬರ್ 2025, 4:55 IST
<div class="paragraphs"><p>ಮೈಸೂರಿನ ರಂಗಾಯಣದಲ್ಲಿ ಬಿ.ವಿ.ಕಾರಂತ ಜನ್ಮದಿನದ ಪ್ರಯುಕ್ತ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ‘ರಂಗಭೀಷ್ಮ ಬಿ.ವಿ.ಕಾರಂತ ಕಾಲೇಜು ನವರಾತ್ರಿ ರಂಗೋತ್ಸವ’ದ </p></div>

ಮೈಸೂರಿನ ರಂಗಾಯಣದಲ್ಲಿ ಬಿ.ವಿ.ಕಾರಂತ ಜನ್ಮದಿನದ ಪ್ರಯುಕ್ತ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ‘ರಂಗಭೀಷ್ಮ ಬಿ.ವಿ.ಕಾರಂತ ಕಾಲೇಜು ನವರಾತ್ರಿ ರಂಗೋತ್ಸವ’ದ

   

ಮೈಸೂರು: ‘ನಾಡಹಬ್ಬ ದಸರಾ ಪ್ರಯುಕ್ತ ರಂಗಾಯಣದಲ್ಲಿ ಸೆ.22ರಿಂದ ಅ.1ರ ವರೆಗೆ ರಂಗಭೀಷ್ಮ ಬಿ.ವಿ.ಕಾರಂತ ಕಾಲೇಜು ನವರಾತ್ರಿ ರಂಗೋತ್ಸವ ನಡೆಯಲಿದ್ದು, 10 ನಾಟಕಗಳು ಪ್ರದರ್ಶನಗೊಳ್ಳಲಿವೆ. ಜೊತೆಗೆ ದೇಶದ ವಿವಿಧೆಡೆಯ ಜಾನಪದ ಕಲಾತಂಡಗಳು ನೃತ್ಯ ಪ್ರದರ್ಶಿಸಲಿವೆ’ ಎಂದು ರಂಗಾಯಣ ನಿರ್ದೇಶಕ ಸತೀಶ್‌ ತಿಪಟೂರು ತಿಳಿಸಿದರು. 

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘8 ಕಾಲೇಜುಗಳು, 2 ಸಂಸ್ಥೆಗಳು ನಡೆಸಿದ್ದ ಕಾಲೇಜು ವಿದ್ಯಾರ್ಥಿಗಳಿಗೆ ನಡೆಸಿದ್ದ ರಂಗ ತರಬೇತಿ ಶಿಬಿರದಲ್ಲಿ ಪ್ರದರ್ಶನಗೊಂಡ ನಾಟಕಗಳು ಉತ್ಸವದಲ್ಲಿರಲಿವೆ’ ಎಂದರು. 

ADVERTISEMENT

‘ಸೆ.22ರಂದು ಸಂಜೆ 5.30ಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ಎಸ್‌.ತಂಗಡಗಿ ಉತ್ಸವ ಉದ್ಘಾಟಿಸಲಿದ್ದು, ರಂಗಾಯಣ ನಾಟಕಗಳ ಭಿತ್ತಿಚಿತ್ರ ಪ್ರದರ್ಶನಕ್ಕೆ ಇಲಾಖೆಯ ಕಾರ್ಯದರ್ಶಿ ಎಂ.ವಿ.ವೆಂಕಟೇಶ್‌ ಚಾಲನೆ ನೀಡುವರು. ಇದೇ ವೇಳೆ ಹಿರಿಯ ರಂಗಭೂಮಿ ಕಲಾವಿದ ಧರ್ಮೇಂದ್ರ ಅರಸ್‌ ಅವರಿಗೆ ನವರಾತ್ರಿ ರಂಗಗೌರವ ನೀಡಲಾಗುವುದು’ ಎಂದು ಮಾಹಿತಿ ನೀಡಿದರು. 

‘ಬಿ.ವಿ.ಕಾರಂತರ ಜನ್ಮದಿನವಾದ ಸೆ.19ರಿಂದ ಕಾಲೇಜು ರಂಗೋತ್ಸವವನ್ನು ಪ್ರತಿವರ್ಷ ನಡೆಸಲಾಗುತ್ತಿತ್ತು. ನವರಾತ್ರಿಯೂ ಇದೇ ವೇಳೆ ಇದ್ದರಿಂದ ರಂಗಭೀಷ್ಮ ಬಿ.ವಿ.ಕಾರಂತ ಕಾಲೇಜು ನವರಾತ್ರಿ ರಂಗೋತ್ಸವ ಎಂದೇ ಇಡಲಾಗಿದೆ. ನಾಟಕಗಳಿಗೆ ಒಂದು ತಿಂಗಳಿಂದಲೂ ಆಯಾ ಕಾಲೇಜಿನಲ್ಲಿ ವಿದ್ಯಾರ್ಥಿಗಳು ನಾಟಕ ತಯಾರಿ ನಡೆಸಿದ್ದಾರೆ’ ಎಂದರು. 

‘ಕಳೆದ ವರ್ಷ ನವರಾತ್ರಿ ಜಾನಪದ ನಾಟಕೋತ್ಸವ ನಡೆಸಲಾಗಿತ್ತು. ಈ ಬಾರಿ 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉತ್ಸವದ ನಾಟಕದಲ್ಲಿ ತೊಡಗಿಸಿಕೊಂಡಿದ್ದಾರೆ. ನಿತ್ಯ ಸಂಜೆ 7ಕ್ಕೆ ಭೂಮಿಗೀತದಲ್ಲಿ ನಾಟಕಗಳ ಪ್ರದರ್ಶನ ಇರಲಿದೆ’ ಎಂದು ತಿಳಿಸಿದರು. 

ಜಾನಪದ ವೈಭವ:

‘ವನರಂಗದಲ್ಲಿ ನಿತ್ಯ ಸಂಜೆ 5.30ಕ್ಕೆ ಜಾನಪದ ನೃತ್ಯಗಳಿದ್ದು, ತೆಲಂಗಾಣ ಲಂಬಾಡಿ, ಮಹಾರಾಷ್ಟ್ರದ ಲಾವಣಿ ಮತ್ತು ಹೋಲಿ, ಗುಜರಾತ್‌ನ ಸಿದ್ದಿ ಢುಮಾಲ್, ಒಡಿಶಾದ ಸಂಬಲ್‌ಪುರಿ, ಕೇರಳದ ತಿರುವತ್ತಿಕಳಿ– ಒಪ್ಪಾನ, ಅಸ್ಸಾಂನ ಬಿಹು ಮತ್ತು ಗುಸಾನ್, ಮಧ್ಯಪ್ರದೇಶದ ನೋರ‍್ತಾ ಮತ್ತು ಸೈತಮ್, ಗುಜರಾತ್‌ನ ರಥ್ವಾ, ಆಂಧ್ರಪ್ರದೇಶದ ತಪ್ಪಾಟಗುಳು, ತಮಿಳುನಾಡಿನ ಕರಗಂ, ಕಾವಾಡಿ ಮತ್ತು ತಪ್ಪಟಂ ಪ್ರದರ್ಶನಗೊಳ್ಳಲಿವೆ’ ಎಂದರು.  

ರಂಗಾಯಣ ಉಪ ನಿರ್ದೇಶಕ ಎಂ.ಡಿ.ಸುದರ್ಶನ್, ಸಂಚಾಲಕರಾದ ಕೆ.ಆರ್.ನಂದಿನಿ, ಬಿ.ಎನ್ ಶಶಿಕಲಾ ಪಾಲ್ಗೊಂಡಿದ್ದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.