ಮೈಸೂರು: ಹೈದರಾಬಾದ್‌ನ ಇಂಡಸ್– ನೇಪಾಳ ರುದ್ರಾಕ್ಷ ಸಂಸ್ಥೆಯಿಂದ ದೀಪಾವಳಿ ಪ್ರಯುಕ್ತ ನಗರದ ಹೋಟೆಲ್ ಸಿಪಾಯ್ ಗ್ರಾಂಡೆಯಲ್ಲಿ ಅ.20ರವರೆಗೆ ನೇಪಾಳದ ರುದ್ರಾಕ್ಷಿಗಳ ಪ್ರದರ್ಶನ ಮತ್ತು ಮಾರಾಟ ಮೇಳ ಏರ್ಪಡಿಸಲಾಗಿದೆ.
‘ವಿರಳವಾದ ರತ್ನದ ಹರಳುಗಳು, ಸುಮಾರು ₹4.5 ಲಕ್ಷ ಬೆಲೆಯುಳ್ಳ ದುಂಡು ಮುಖದ ಏಕಮುಖಿ ರುದ್ರಾಕ್ಷಿಯೂ ಲಭ್ಯವಿದೆ. ಯಾವ ರುದ್ರಾಕ್ಷಿಯನ್ನು ಯಾವಾಗ ಹಾಗೂ ಯಾರು ಧರಿಸಬೇಕು ಎಂಬುದರ ಬಗ್ಗೆ ವೇದ ಗಣಿತದ ಮೂಲಕ ಜನ್ಮರಾಶಿ, ಜನ್ಮನಕ್ಷತ್ರದ ಆಧಾರದಲ್ಲಿ ತಿಳಿಸಲಾಗುವುದು. ಅಸಲಿ, ನಕಲಿ ಬಗ್ಗೆಯೂ ಮಾಹಿತಿ ನೀಡಲಾಗುವುದು. ಗ್ರಾಹಕರಿಗೆ ಗುಣಮಟ್ಟದ, ವಿವಿಧ ಮುಖಗಳ ರುದ್ರಾಕ್ಷಿಗಳನ್ನೂ ತರಿಸಿ ಕೊಡಲಾಗುವುದು. ಮಾಂಸಾಹಾರಿಗಳೂ ಧರಿಸಬಹುದಾಗಿದ್ದು, ಎಲ್ಲರಿಗೂ ಶುಭ ತರಲಿದೆ’ ಎಂದು ಸಂಸ್ಥೆಯ ನಿರ್ದೇಶಕ ನರೇಂದ್ರ ಕಾಶಿರೆಡ್ಡಿ ತಿಳಿಸಿದ್ದಾರೆ.
‘ಮೇಳವು ಬೆಳಿಗ್ಗೆ 10.30ರಿಂದ ರಾತ್ರಿ 9ರವರೆಗೆ ತೆರಿದಿರುತ್ತದೆ. ಮಾಹಿತಿಗೆ ಮೊ.ಸಂ.70973 96666 ಸಂಪರ್ಕಿಸಬಹುದು’ ಎಂದು ಪ್ರಕಟಣೆಯಲ್ಲಿ ಕೋರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.