ADVERTISEMENT

ಕೋವಿಡ್‌ ವೇಳೆ ಕೃಷಿಯತ್ತ ಚಿತ್ತ: ಹೊಸ ಬದುಕು ಕಟ್ಟಿಕೊಂಡ ಸರಗೂರಿನ ಗಿರೀಶ್‌

ಎಸ್.ಆರ್.ನಾಗರಾಮ
Published 26 ಡಿಸೆಂಬರ್ 2021, 2:03 IST
Last Updated 26 ಡಿಸೆಂಬರ್ 2021, 2:03 IST
ಸರಗೂರಿನ ಗಿರೀಶ್ ತಮ್ಮ ಜಮೀನಿನಲ್ಲಿ ಕೃಷಿ ಚಟುವಟಿಕೆ ಮಾಡುತ್ತಿರುವುದು
ಸರಗೂರಿನ ಗಿರೀಶ್ ತಮ್ಮ ಜಮೀನಿನಲ್ಲಿ ಕೃಷಿ ಚಟುವಟಿಕೆ ಮಾಡುತ್ತಿರುವುದು   

ಸರಗೂರು: ಕೋವಿಡ್‌ ಅವಧಿಯಲ್ಲಿ ಹಲವರು ನಗರವನ್ನು ತೊರೆದು ಗ್ರಾಮಗಳತ್ತ ಬಂದು ಕೃಷಿ ಆಧರಿಸಿ ಹೊಸ ಬದುಕು ಕಂಡುಕೊಂಡಿದ್ದಾರೆ. ಸರಗೂರಿನ ಎಸ್‌.ಪಿ.ಗಿರೀಶ್‌ ಕೂಡಾ ಅಂತವರ ಸಾಲಿನಲ್ಲಿ ಸೇರುತ್ತಾರೆ.

ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ ಹೌಸ್ ಏಜೆಂಟ್ ಆಗಿ ಕೆಲಸದಲ್ಲಿದ್ದ ಗಿರೀಶ್, ಕೋವಿಡ್‌ ಕಾರಣದಿಂದ ಕೆಲಸ ತ್ಯಜಿಸಿ ತಮ್ಮ ಹಳ್ಳಿಯನ್ನು ಸೇರಿಕೊಂಡಿದ್ದರು.

ನಗರವನ್ನು ಬಿಟ್ಟು ಬಂದ ಅವರು ಸುಮ್ಮನೆ ಕೂರಲಿಲ್ಲ. ಕೃಷಿಯಲ್ಲೇ ಹೊಸ ಬದುಕು ಕಟ್ಟಿಕೊಂಡು ಇದೀಗ ಕುಟುಂಬದೊಂದಿಗೆ ನೆಮ್ಮದಿಯ ಜೀವನ ಸಾಗಿಸುತ್ತಿದ್ದಾರೆ. ಎರಡು ಎಕರೆ ಜಮೀನಿನಲ್ಲಿ ಬಾಳೆ, ಕಬ್ಬು, ಜೋಳ ಬೆಳೆಯುತ್ತಿದ್ದಾರೆ. ಮೂರು ಹಸುಗಳನ್ನು ಸಾಕಿದ್ದು, ಹಾಲು ಮಾರಾಟದಿಂದಲೂ ಆದಾಯ ಗಳಿಸುತ್ತಿದ್ದಾರೆ.

ADVERTISEMENT

‘ಬಂಡವಾಳವನ್ನು ಕೃಷಿಯಲ್ಲಿ ತೊಡಗಿಸಿದರೆ, ಆದಾಯ ಗಳಿಸಿ ಉತ್ತಮ ಜೀವನ ಕಟ್ಟಿಕೊಳ್ಳಬಹುದು. ಸಾಲ ಮಾಡಿದರೆ ಲಾಭ ನಷ್ಟಗಳನ್ನು ಸರಿದೂಗಿಸುವುದು ಕಷ್ಟವಾಗಬಹುದು’ ಎಂದು ಗಿರೀಶ್‌ ಹೇಳುವರು.

‘ನಮ್ಮ ಭಾಗದಲ್ಲಿ ಕಾಡುಪ್ರಾಣಿಗಳ ಹಾವಳಿ ಹೆಚ್ಚಾಗಿದೆ. ಇದೆಲ್ಲದರ ನಡುವೆ ಕೃಷಿಯಲ್ಲಿ ಬದುಕು ನಿರ್ವಹಿಸುವುದು ಸ್ವಲ್ಪ ಕಷ್ಟ. ಆದರೆ ಪರಿಶ್ರಮಪಟ್ಟರೆ ಕೃಷಿಯಿಂದ ನೆಮ್ಮದಿಯ ಬದುಕು ಸಾಗಿಸಬಹುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.