ADVERTISEMENT

ಎನ್‌ಐಇ: ಖಗ್ರಾಸ ಚಂದ್ರ ಗ್ರಹಣ ವೀಕ್ಷಣೆ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2025, 2:34 IST
Last Updated 8 ಸೆಪ್ಟೆಂಬರ್ 2025, 2:34 IST
<div class="paragraphs"><p>ಮೈಸೂರಿನಲ್ಲಿ ಭಾನುವಾರ ಆಗಸದಲ್ಲಿ ಕೆಂಪು ಬಣ್ಣದಲ್ಲಿ ಕಂಗೊಳಿಸಿದ ಚಂದ್ರ ಗ್ರಹಣ. <br></p></div>

ಮೈಸೂರಿನಲ್ಲಿ ಭಾನುವಾರ ಆಗಸದಲ್ಲಿ ಕೆಂಪು ಬಣ್ಣದಲ್ಲಿ ಕಂಗೊಳಿಸಿದ ಚಂದ್ರ ಗ್ರಹಣ.

   

ಪ್ರಜಾವಾಣಿ ಚಿತ್ರ/ಅನೂಪ್ ರಾಘ.ಟಿ.

ಮೈಸೂರು: ನಗರದ ಎನ್‌ಐಇ ಕಾಲೇಜಿನಲ್ಲಿ ಭಾನುವಾರ ಖಗ್ರಾಸ ಚಂದ್ರ ಗ್ರಹಣ ವಿದ್ಯಮಾನ ವೀಕ್ಷಣೆ ಕಾರ್ಯಕ್ರಮ ನಡೆಯಿತು.

ADVERTISEMENT

ಮಾನಸಗಂಗೋತ್ರಿಯಲ್ಲಿನ ಭಾರತೀಯ ಖಗೋಳ ಭೌತಶಾಸ್ತ್ರ ಸಂಸ್ಥೆಯ ಕಾಸ್ಮಾಲಜಿ ಶಿಕ್ಷಣ ಮತ್ತು ಸಂಶೋಧನಾ ತರಬೇತಿ ಕೇಂದ್ರ (ಕಾಸ್ಮೊಸ್‌) ಹಾಗೂ ಎನ್‌ಐಇ ಐಯುಸಿಇಇ ಸ್ಟುಡೆಂಟ್‌ ಚಾಪ್ಟರ್‌ನಿಂದ ಆಯೋಜಿಸಲಾಗಿತ್ತು. ನಗರದಲ್ಲಿ ಮೋಡ ಹಾಗೂ ಮಳೆಯ ಕಾರಣ ಸ್ಪಷ್ಟ ವೀಕ್ಷಣೆ ಲಭಿಸದಿದ್ದರೂ ಸಂಸ್ಥೆಯ ಬೆಂಗಳೂರು, ಲಡಾಖ್‌, ಕೊಡೈಕೆನಾಲ್‌ ಕೇಂದ್ರದಿಂದ ನೇರ ಪ್ರಸಾರ ವ್ಯವಸ್ಥೆ ಕಲ್ಪಿಸಲಾಗಿತ್ತು.

ಟೆಲಿಸ್ಕೋ‍ಪ್‌, ಬೈನಾಕ್ಯುಲರ್‌ ಉಪಕರಣಗಳೊಂದಿಗೆ ಆಯೋಜಕರೂ ಸಿದ್ಧರಿದ್ದರು. ರಾತ್ರಿ 8.58ಕ್ಕೆ ಆರಂಭವಾದ ಗ್ರಹಣವೂ 11.42ಕ್ಕೆ ಪೂರ್ಣ ಹಂತ ತಲುಪಿ 2.25ಕ್ಕೆ ಮುಗಿಯಲಿದೆ ಎಂದು ತಿಳಿಸಿದರು.

ಕಾಸ್ಮೋಸ್‌ನ ಪ್ರಾಜೆಕ್ಟ್ ಅಸೋಸಿಯೇಟ್ ಎನ್.ಅಮೋಘವರ್ಷ ಅವರು ಗ್ರಹಣ ಕುರಿತ ಮಾಹಿತಿಯನ್ನು ತಿಳಿಸಿದರು. ಸಾರ್ವಜನಿಕರು, ವಿದ್ಯಾರ್ಥಿಗಳು ಸೇರಿದಂತೆ ನೂರಕ್ಕೂ ಅಧಿಕ ಜನರು ಭಾಗವಹಿಸಿದ್ದರು. ಕಾಲೇಜಿನ ಕೆ.ಜಯಂತ್‌, ಮಯೂರ ತಾಪ್ಕಿರೆ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.