ADVERTISEMENT

ರೋಟರಿ ಬೃಂದಾವನ ಚೆಸ್ ಟೂರ್ನಿ: ನಿವಾನ್‌ ರಾಘವೇಂದ್ರ ಚಾಂಪಿಯನ್‌

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2025, 20:16 IST
Last Updated 10 ಅಕ್ಟೋಬರ್ 2025, 20:16 IST
ಮೈಸೂರಿನಲ್ಲಿ ನಡೆದ ‘ರೋಟರಿ ಬೃಂದಾವನ 16 ವರ್ಷದೊಳಗಿನವರ ಮುಕ್ತ ರೇಟಿಂಗ್‌ ಚೆಸ್ ಟೂರ್ನಿ’ಯಲ್ಲಿ ಪ್ರಶಸ್ತಿ ಜಯಿಸಿದ ನಿವಾನ್‌ ರಾಘವೇಂದ್ರ (ಮಧ್ಯ), ಯು.ಡಿ. ಆಕಾಂಕ್ಷ್‌ ಹಾಗೂ ಎಸ್‌.ವಿಶ್ವಜಿತ್‌ 
ಮೈಸೂರಿನಲ್ಲಿ ನಡೆದ ‘ರೋಟರಿ ಬೃಂದಾವನ 16 ವರ್ಷದೊಳಗಿನವರ ಮುಕ್ತ ರೇಟಿಂಗ್‌ ಚೆಸ್ ಟೂರ್ನಿ’ಯಲ್ಲಿ ಪ್ರಶಸ್ತಿ ಜಯಿಸಿದ ನಿವಾನ್‌ ರಾಘವೇಂದ್ರ (ಮಧ್ಯ), ಯು.ಡಿ. ಆಕಾಂಕ್ಷ್‌ ಹಾಗೂ ಎಸ್‌.ವಿಶ್ವಜಿತ್‌    

ಮೈಸೂರು: ನಗರದ ನಿವಾನ್‌ ರಾಘವೇಂದ್ರ ಅವರು ಇಲ್ಲಿ ಮುಕ್ತಾಯಗೊಂಡ ‘ರೋಟರಿ ಬೃಂದಾವನ 16 ವರ್ಷದೊಳಗಿನವರ ಮುಕ್ತ ರೇಟಿಂಗ್‌ ಚೆಸ್ ಟೂರ್ನಿ’ಯಲ್ಲಿ ಪ್ರಶಸ್ತಿ ಜಯಿಸಿದರು.

8ನೇ ಸುತ್ತಿನ ಅಂತ್ಯಕ್ಕೆ ಮಂಗಳೂರಿನ ಯು.ಡಿ.ಆಕಾಂಕ್ಷ್‌ ಹಾಗೂ ಮೈಸೂರಿನ ಎಸ್‌.ವಿಶ್ವಜಿತ್‌ ಅವರೊಂದಿಗೆ ತಲಾ 7 ಅಂಕದೊಂದಿಗೆ ನಿವಾನ್‌ ಜಂಟಿ ಅಗ್ರಸ್ಥಾನ ಪಡೆದಿದ್ದರೂ, ಟೈಬ್ರೇಕರ್‌ ಆಧಾರದಲ್ಲಿ ಸ್ಥಾನ ನಿರ್ಧರಿಸಲಾಯಿತು. ನಿವಾನ್‌ ₹ 40ಸಾವಿರದೊಂದಿಗೆ ಪ್ರಥಮ ಸ್ಥಾನ ಪಡೆದರು. ಯು.ಡಿ.ಆಕಾಂಕ್ಷ್ 2ನೇ (₹ 30 ಸಾವಿರ) ಹಾಗೂ ಎಸ್‌.ವಿಶ್ವಜಿತ್‌ 3ನೇ (₹ 20 ಸಾವಿರ) ಸ್ಥಾನ ಗಳಿಸಿದರು. 

ಮಂಗಳೂರಿನ ಆರುಷ್‌ ಭಟ್ 4ನೇ (₹ 15ಸಾವಿರ), ಪಿ.ಅಭಿನವ 5ನೇ (₹ 10ಸಾವಿರ), ಗಹನ್ ಗಣಪತಿ 6ನೇ (₹ 9ಸಾವಿರ) ಉಡುಪಿಯ ಬಿ.‍ಪಿ.ಉತ್ಸವ 7ನೇ (₹ 8ಸಾವಿರ), ಮಂಡ್ಯದ ಎಂ.ಎಸ್‌.ಜಾಹ್ನವಿ 8ನೇ (₹ 7ಸಾವಿರ), ವಿ.ಎನ್‌.ಅಥರ್ವ 9ನೇ (₹ 6ಸಾವಿರ) ಹಾಗೂ ಮೈಸೂರಿನ ಸಾತ್ವಿಕ್‌ ವಿಶ್ವನಾಥ್‌ 10ನೇ (₹ 5ಸಾವಿರ) ಸ್ಥಾನ ಪಡೆದರು. 

ADVERTISEMENT

30 ಸ್ಪರ್ಧಿಗಳಿಗೆ ಒಟ್ಟು ₹ 2 ಲಕ್ಷ ಮೊತ್ತದ ಬಹುಮಾನ ವಿತರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.