ADVERTISEMENT

Operation Sindoor: ಮೈಸೂರ್‌ ಪಾಕ್‌ ವಿತರಿಸಿ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 8 ಮೇ 2025, 13:55 IST
Last Updated 8 ಮೇ 2025, 13:55 IST
ಮೈಸೂರಿನ ಚಾಮುಂಡಿಪುರಂ ವೃತ್ತದಲ್ಲಿ ಅಪೂರ್ವ ಸ್ನೇಹ ಬಳಗದ ಸದಸ್ಯರು ಭಾರತೀಯ ಸೇನೆಯ ‘ಆಪರೇಷನ್‌ ಸಿಂಧೂರ’ ಕಾರ್ಯಾಚರಣೆ ಯಶಸ್ವಿಯಾಗಿರುವುದಕ್ಕೆ ಗುರುವಾರ ನಾಗರಿಕರಿಗೆ ‘ಮೈಸೂರು ಪಾಕ್’ ಹಂಚಿ ಹಾಗೂ ರಾಷ್ಟ್ರಧ್ವಜ ಹಿಡಿದು ಸಂಭ್ರಮಿಸಿದರು.
ಮೈಸೂರಿನ ಚಾಮುಂಡಿಪುರಂ ವೃತ್ತದಲ್ಲಿ ಅಪೂರ್ವ ಸ್ನೇಹ ಬಳಗದ ಸದಸ್ಯರು ಭಾರತೀಯ ಸೇನೆಯ ‘ಆಪರೇಷನ್‌ ಸಿಂಧೂರ’ ಕಾರ್ಯಾಚರಣೆ ಯಶಸ್ವಿಯಾಗಿರುವುದಕ್ಕೆ ಗುರುವಾರ ನಾಗರಿಕರಿಗೆ ‘ಮೈಸೂರು ಪಾಕ್’ ಹಂಚಿ ಹಾಗೂ ರಾಷ್ಟ್ರಧ್ವಜ ಹಿಡಿದು ಸಂಭ್ರಮಿಸಿದರು.   

ಮೈಸೂರು: ಚಾಮುಂಡಿಪುರಂ ವೃತ್ತದಲ್ಲಿ ಅಪೂರ್ವ ಸ್ನೇಹ ಬಳಗದ ಸದಸ್ಯರು ಭಾರತೀಯ ಸೇನೆಯ ‘ಆಪರೇಷನ್‌ ಸಿಂಧೂರ’ ಕಾರ್ಯಾಚರಣೆ ಯಶಸ್ವಿಯಾಗಿರುವುದಕ್ಕೆ ಗುರುವಾರ ನಾಗರಿಕರಿಗೆ ‘ಮೈಸೂರು ಪಾಕ್’ ಹಂಚಿ ಸಂಭ್ರಮಿಸಿದರು.

ಬಿಜೆಪಿ ಮುಖಂಡ ಮಾ.ವಿ.ರಾಮಪ್ರಸಾದ್‌ ಮಾತನಾಡಿ, ‘ಭಯೋತ್ಪಾದಕರು ನಡೆಸಿದ ಪಹಲ್ಗಾಮ್ ದಾಳಿಗೆ ಭಾರತೀಯ ಸೇನೆಯು ತಕ್ಕ ಪ್ರತ್ಯುತ್ತರ ನೀಡಿದೆ. ದೇಶದ ವೀರ ಯೋಧರ ಪರಿಶ್ರಮವನ್ನು ಭಾರತೀಯರು ಗೌರವಿಸಬೇಕು’ ಎಂದರು. 

ಕೆಪಿಸಿಸಿ ಸದಸ್ಯ ನಜರ್‌ಬಾದ್ ನಟರಾಜ್, ಕೆ.ಆರ್.ಬ್ಯಾಂಕ್ ಅಧ್ಯಕ್ಷ ಬಸವರಾಜ್ ಬಸಪ್ಪ, ಅಪೂರ್ವ ಸುರೇಶ್, ಬಿಜೆಪಿ ಮೈಸೂರು ನಗರ ಪ್ರಧಾನ ಕಾರ್ಯದರ್ಶಿ ಕೇಬಲ್ ಮಹೇಶ್, ಮುಖಂಡರಾದ ಎಂ.ಡಿ ಪಾರ್ಥಸಾರಥಿ, ದೂರ ರಾಜಣ್ಣ, ಜಗದೀಶ್, ನಜರ್‌ಬಾದ್‌ ಲೋಕೇಶ್, ವರದರಾಜು, ಶಿವಲಿಂಗಸ್ವಾಮಿ, ಪುರುಷೋತ್ತಮ್, ಸುಚೇಂದ್ರ ಪಾಲ್ಗೊಂಡಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.