ADVERTISEMENT

ಬೇಡಿಕೆ ಈಡೇರಿಕೆಗೆ ಪ್ರಯತ್ನ; ಶಾಸಕ ತನ್ವೀರ್‌

ಪೆಂಡಾಲ್‌ ಮಾಲೀಕರ ಸಂಘದ ರಾಜ್ಯಮಟ್ಟದ 3ನೇ ಅಧಿವೇಶನ ಸಮಾರೋಪ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2023, 5:17 IST
Last Updated 13 ಸೆಪ್ಟೆಂಬರ್ 2023, 5:17 IST
ಮೈಸೂರು ಜಿಲ್ಲಾ ಪೆಂಡಾಲ್ ಮಾಲೀಕರ ಸಂಘ ಆಯೋಜಿಸಿದ್ದ ಸಂಘದ ರಾಜ್ಯಮಟ್ಟದ 3ನೇ ಮಹಾಅಧಿವೇಶನದ ಸಮಾರೋಪಭದಲ್ಲಿ ಶಾಸಕ ತನ್ವೀರ್ ಸೇಠ್ ಮಾತನಾಡಿದರು. ಅಬ್ದುಲ್ ರೆಹಮಾನ್ ವಾಂಜಿ, ಆರ್.ಲಕ್ಷ್ಮಣ್, ಶಿವಕುಮಾರ್ ಲಿಂಗಪ್ಪ, ತಾಜ್ ಭಾಯಿ, ವಸೀಂ, ಅನಿಲ್‌ ಕುಮಾರ್ ಇದ್ದಾರೆ     ಪ್ರಜಾವಾಣಿ ಚಿತ್ರ
ಮೈಸೂರು ಜಿಲ್ಲಾ ಪೆಂಡಾಲ್ ಮಾಲೀಕರ ಸಂಘ ಆಯೋಜಿಸಿದ್ದ ಸಂಘದ ರಾಜ್ಯಮಟ್ಟದ 3ನೇ ಮಹಾಅಧಿವೇಶನದ ಸಮಾರೋಪಭದಲ್ಲಿ ಶಾಸಕ ತನ್ವೀರ್ ಸೇಠ್ ಮಾತನಾಡಿದರು. ಅಬ್ದುಲ್ ರೆಹಮಾನ್ ವಾಂಜಿ, ಆರ್.ಲಕ್ಷ್ಮಣ್, ಶಿವಕುಮಾರ್ ಲಿಂಗಪ್ಪ, ತಾಜ್ ಭಾಯಿ, ವಸೀಂ, ಅನಿಲ್‌ ಕುಮಾರ್ ಇದ್ದಾರೆ     ಪ್ರಜಾವಾಣಿ ಚಿತ್ರ   

ಮೈಸೂರು: ‘ಪೆಂಡಾಲ್ ಮಾಲೀಕರು ಹಾಗೂ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ’ ಎಂದು ಶಾಸಕ ತನ್ವೀರ್‌ ಸೇಠ್ ತಿಳಿಸಿದರು.

ನಗರದ ವಸ್ತುಪ್ರದರ್ಶನ ಆವರಣದಲ್ಲಿ ‘ಜಿಲ್ಲಾ ಪೆಂಡಾಲ್‌ ಮಾಲೀಕರ ಸಂಘ’, ‘ರಾಜ್ಯ ಶಾಮಿಯಾನ ಡೆಕೋರೇಷನ್‌, ಧ್ವನಿ ಮತ್ತು ಬೆಳಕು  ಕ್ಷೇಮಾಭಿವೃದ್ಧಿ ಸಂಘ’ದ ಸಹಯೋಗದಲ್ಲಿ ನಡೆಯುತ್ತಿರುವ ಸಂಘದ ರಾಜ್ಯಮಟ್ಟದ 3ನೇ ಅಧಿವೇಶನ ಸಮಾರೋಪ ದಿನ ಮಂಗಳವಾರ ಭಾಗವಹಿಸಿ ಮಾತನಾಡಿದರು.

‘ಗಣಪತಿ ಹಬ್ಬದಲ್ಲಿ ಡಿ.ಜೆ.ಗೆ ಅವಕಾಶ ಕೊಡುವುದು ಉದ್ಯಮದವರಿಗೆ ಅನುಕೂಲವಾಗುತ್ತದೆ. ಆದರೆ, ಕಾನೂನು ಸುವ್ಯವಸ್ಥೆಯನ್ನೂ ಗಮನಿಸಬೇಕಿದ್ದು, ಸರ್ಕಾರ ಯೋಚಿಸಿ ನಿರ್ಧಾರ ತೆಗೆದುಕೊಳ್ಳಲಿದೆ’ ಎಂದರು.

ADVERTISEMENT

ಕಾರ್ಮಿಕ ಇಲಾಖೆಯಿಂದ ವೃತ್ತಿಯಲ್ಲಿರುವವರನ್ನು ವಿವಿಧ ಯೋಜನೆಗಳಲ್ಲಿ ಪರಿಗಣಿಸಬೇಕು ಎಂಬ ಬೇಡಿಕೆಗೆ ಸ್ಪಂದಿಸಿ, ‘ಶೀಘ್ರವೇ ಈ ಕುರಿತು ಸಂಬಂಧಿಸಿದವರಿಗೆ ಒತ್ತಾಯ ಹೇರಲಿದ್ದೇನೆ’ ಎಂದರು.

ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಪದಾಧಿಕಾರಿಗಳಿಗೆ ಲಕ್ಕಿ ಬಂಪರ್‌ ಕೂಪನ್‌ ಡ್ರಾ ನಡೆಸಲಾಯಿತು. ಅನೇಕರು ಬಹುಮಾನ ಪಡೆದು ಸಂಭ್ರಮಿಸಿದರು.

ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದ ಜಿಲ್ಲಾ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು. ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳನ್ನು ಅಭಿನಂದಿಸಲಾಯಿತು.

ರಾಜ್ಯ ಶಾಮಿಯಾನ ಡೆಕೋರೇಷನ್ ಹಾಗೂ ಧ್ವನಿ– ಬೆಳಕು ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಆರ್‌.ಲಕ್ಷ್ಮಣ್, ಉಪಾಧ್ಯಕ್ಷ ಅಬ್ದುಲ್ ರೆಹಮಾನ್ ವಾಂಜಿ, ಜಿಲ್ಲಾ ಪೆಂಡಾಲ್ ಮಾಲೀಕರ ಸಂಘದ ಅಧ್ಯಕ್ಷ ಶಿವಕುಮಾರ್, ಸಂಘದ ಪದಾಧಿಕಾರಿಗಳಾದ ವಸೀಂ, ಮಂಜುನಾಥ್, ಸಿರಾಜ್, ರವೀಶ್‌, ಮೊಹಮ್ಮದ್‌ ಶಂಶೂರ್ ರೆಹಮಾನ್, ಎಚ್‌.ನವೀನ್‌ ಕುಮಾರ್, ಮೆಹಬೂಬ್‌ಮುಲ್ಲಾ ಸಿದ್ಧಾಪುರ, ಗುಂಡಯ್ಯ ಸ್ವಾಮಿ, ಲಿಂಗಪ್ಪ, ಬಿ.ವಿ.ಮಹೇಶ್ವರ, ರಫೀಕ್‌ ಪುಣೇಕರ್‌, ನಾಸೀರ್‌ ತಾಜ್‌ ಕೊಪ್ಪ, ಮಾಣಿಕ್‌ ಚಂದ್‌, ಮಂಜುನಾಥ ಕೋರಿ, ರಾಜಾಸಾಬ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.