
ಪಿರಿಯಾಪಟ್ಟಣ: ರಾಜ್ಯ ರೈತ ಸಂಘದ ತಾಲ್ಲೂಕು ಅಧ್ಯಕ್ಷರಾಗಿ ಕೊಣಸೂರು ಆನಂದ್ ಆಯ್ಕೆಯಾದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ನಡೆದ ಸಭೆಯಲ್ಲಿ ತಾಲ್ಲೂಕು ಅಧ್ಯಕ್ಷರಾಗಿ ಆನಂದ್ ಅವರನ್ನು ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಕೋಮಲಾಪುರ ಸ್ವಾಮಿಗೌಡ ಅವರ ಅವಧಿ ಮುಗಿದಿದ್ದು, ಸೋಮವಾರ ಅಧಿಕಾರ ಹಸ್ತಾಂತರಿಸಿದರು. ಜಿಲ್ಲಾ ಘಟಕದ ಅಧ್ಯಕ್ಷ ಹೊಸೂರು ಕುಮಾರ್ ವಹಿಸಿದ್ದರು. ಉಪಾಧ್ಯಕ್ಷ ಪ್ರಕಾಶ್ ರಾಜೇಅರಸ್, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಗಡಿಗೌಡ, ಉಪಾಧ್ಯಾಕ್ಷ ಮಲ್ಲೇಶ್ ಗುರುರಾಜ್, ಕರೀಗೌಡರು, ತಾಲ್ಲೂಕು ಯುವ ಘಟಕದ ಅಧ್ಯಕ್ಷ ಮಹದೇವ್ ಕಾರ್ಯಕರ್ತರಾದ ಸತೀಶ್, ದೇವರಾಜ್, ಮಹೇಶ್, ದಶರಥ ಧನಂಜಯ ಕುಡಕೂರು ಹರೀಶ್, ಮಲ್ಲಿಕಾರ್ಜುನ್, ಶಿವು, ರವಿ, ಬುಂಡೇಗೌಡ, ಜಗದೀಶ್ ಆರಾಧ್ಯ, ಶಿವಮೂರ್ತಿ, ಗಣೇಶ, ಸುರೇಶ್, ರಾಮೇಗೌಡ, ಕಾವೇರಮ್ಮ, ಲೀಲಾವತಿ, ಮಂಜುಳಾ, ಮಂಜುನಾಥ್, ಪಾಲಾಕ್ಷ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.