ADVERTISEMENT

ಮಹಿಳೆಯರಿಗೆ ಮೇಕಪ್‌ ಕಿಟ್‌

ಪಿರಿಯಾಪಟ್ಟಣ ತಾಲ್ಲೂಕಿನಲ್ಲಿ ಶಾಂತಿಯುತ ಮತದಾನ

​ಪ್ರಜಾವಾಣಿ ವಾರ್ತೆ
Published 3 ಮೇ 2019, 18:10 IST
Last Updated 3 ಮೇ 2019, 18:10 IST
ಪಿರಿಯಾಪಟ್ಟಣ ಶಾಸಕ ಕೆ. ಮಹದೇವ್ ಕುಟುಂಬ ಸದಸ್ಯರೊಂದಿಗೆ ಮತಗಟ್ಟೆ ಸಂಖ್ಯೆ 189ರಲ್ಲಿ ಮತ ಚಲಾಯಿಸಿದರು
ಪಿರಿಯಾಪಟ್ಟಣ ಶಾಸಕ ಕೆ. ಮಹದೇವ್ ಕುಟುಂಬ ಸದಸ್ಯರೊಂದಿಗೆ ಮತಗಟ್ಟೆ ಸಂಖ್ಯೆ 189ರಲ್ಲಿ ಮತ ಚಲಾಯಿಸಿದರು   

ಪಿರಿಯಾಪಟ್ಟಣ: ತಾಲ್ಲೂಕಿನ ಮತದಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಮತಗಟ್ಟೆಗಳಿಗೆಬಂದು ಉತ್ಸಾಹದಿಂದ ಮತದಾನ ಮಾಡಿದರು.

ಉಪ್ಪಾರಗೇರಿ ಮತ್ತು ಕಂಪಲಾಪುರದಲ್ಲಿ ಸಖಿ ಮತಗಟ್ಟೆ ಗಳನ್ನು ಸ್ಥಾಪಿಸಲಾಗಿತ್ತು. ಮತದಾನ ಮಾಡಲು ಬರುವ ಮಹಿಳೆಯರಿಗೆ ಮೇಕಪ್‌ ಕಿಟ್‌ಗಳನ್ನು ನೀಡಲಾಯಿತು. ಮುತ್ತೂರಿನ ರಾಜೀವ್‍ಗ್ರಾಮ, ರಾಣಿ ಗೇಟ್‌, ಅಬ್ಬಳತಿ ಹಾಡಿಗಳಲ್ಲಿ ಸಾಂಪ್ರದಾಯಿಕಮತಗಟ್ಟೆಗಳನ್ನು ತೆರೆಯಲಾಗಿತ್ತು. ಈ ಮತಗಟ್ಟೆಯಲ್ಲಿ ಚಪ್ಪರ ಹಾಕಿ, ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಮತಯಂತ್ರದ ಬಳಿ ಗುಡಿಸಲು ನಿರ್ಮಿಸಲಾಗಿತ್ತು. ಮತದಾನ ಮಾಡಿಬಂದವರಿಗೆ ಮಜ್ಜಿಗೆ ವಿತರಿಸಲಾಯಿತು.

ಶಾಸಕ ಕೆ.ಮಹದೇವ್‌ ಅವರು ಕುಟುಂಬ ಸದಸ್ಯರೊಂದಿಗೆ ಪಟ್ಟಣದ ಮತಗಟ್ಟೆ ಸಂಖ್ಯೆ 189ಕ್ಕೆ ಬಂದು ಮತ ಚಲಾಯಿಸಿದರು. ಮಾಜಿ ಶಾಸಕ ಎಚ್‍.ಸಿ.ಬಸವರಾಜು ನಂದಿನಾಥಪುರ ಗ್ರಾಮದಲ್ಲಿ ಮತ ಚಲಾಯಿಸಿದರು. ಮಾಜಿ ಶಾಸಕ ಕೆ.ವೆಂಕಟೇಶ್ ತಮ್ಮ ಸ್ವಗ್ರಾಮ ಕಿತ್ತೂರಿನ ಮತಗಟ್ಟೆಯಲ್ಲಿ ಹಕ್ಕು ಚಲಾಯಿಸಿದರು.

ADVERTISEMENT

ಬೆಳಿಗ್ಗೆ 9 ಗಂಟೆಗೆ ಶೇ 8.32ರಷ್ಟು ಮತದಾನವಾಗಿತ್ತು. 11 ಗಂಟೆಗೆ ಶೇ 20.14ಕ್ಕೇರಿತು. ಮಧ್ಯಾಹ್ನ 1 ಗಂಟೆಗೆ ಶೇ 39.19 ಹಾಗೂ 3 ಗಂಟೆಗೆ ಶೇ 56.47 ರಷ್ಟು ಮತದಾನವಾಯಿತು. ಸಂಜೆ 5 ಗಂಟೆಗೆ ಶೇ 71.45 ರಷ್ಟು ಮತದಾನವಾಯಿತು.

ಶತಾಯುಷಿಗಳಾದ ಬಾರ್ಸೆ ಗ್ರಾಮದ ಸಿದ್ದಾಜಮ್ಮಣ್ಣಿ ಮತ್ತು ಗೌರಮ್ಮಣ್ಣಿ ಹಾಗೂ ಮೆಲ್ಲಹಳ್ಳಿ ಗ್ರಾಮದಲ್ಲಿ ಬೋರಮ್ಮ ಎಂಬುವರು ಮತ ಚಲಾಯಿಸಿದ್ದು ವಿಶೇಷವಾಗಿತ್ತು.

ಸಂಬಂಧಿಕರ ಮತಗಳನ್ನು ಚಲಾಯಿಸಿದ ವ್ಯಕ್ತಿ

ಪಿರಿಯಾಪಟ್ಟಣ ತಾಲ್ಲೂಕಿನ ಸಾಲುಕೊಪ್ಪಲು ಗ್ರಾಮದಲ್ಲಿ ರಾಜಕೀಯ ಪಕ್ಷದ ಮುಖಂಡರೊಬ್ಬರು ತಮ್ಮ ಸಂಬಂಧಿಕರ ಮತಗಳನ್ನು ತಾವೇ ಚಲಾಯಿಸುತ್ತಿರುವ ವಿಡಿಯೊ ಎಲ್ಲೆಡೆ ವೈರಲ್ ಆಗಿದೆ. ಸುದ್ದಿ ತಿಳಿದ ತಹಶೀಲ್ದಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.