ADVERTISEMENT

ಪೊಲೀಸ್‌ ಕ್ರೀಡಾಕೂಟ: ಸಿಇಎಆರ್‌ ಚಾಂಪಿಯನ್

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2018, 15:35 IST
Last Updated 8 ಡಿಸೆಂಬರ್ 2018, 15:35 IST
ಮೈಸೂರಿನಲ್ಲಿ ನಡೆದ ಪೊಲೀಸ್ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಹಗ್ಗಜಗ್ಗಾಟದಲ್ಲಿ ವಿಜಯಿಗಳಾದ ನಗರ ಸಶಸ್ತ್ರ ಮೀಸಲುಪಡೆ (ಸಿಎಆರ್) ಸಿಬ್ಬಂದಿ
ಮೈಸೂರಿನಲ್ಲಿ ನಡೆದ ಪೊಲೀಸ್ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಹಗ್ಗಜಗ್ಗಾಟದಲ್ಲಿ ವಿಜಯಿಗಳಾದ ನಗರ ಸಶಸ್ತ್ರ ಮೀಸಲುಪಡೆ (ಸಿಎಆರ್) ಸಿಬ್ಬಂದಿ   

ಮೈಸೂರು: ನಗರದಲ್ಲಿ ನಡೆದ ಮೈಸೂರು ನಗರ ಪೊಲೀಸ್ ವಾರ್ಷಿಕ ಕ್ರೀಡಾಕೂಟದಲ್ಲಿ ನಗರ ಸಶಸ್ತ್ರ ಮೀಸಲುಪಡೆ (ಸಿಎಆರ್) ತಂಡವು ಚಾಂಪಿಯನ್‌ಶಿಪ್ ಪಡೆದುಕೊಂಡಿತು.

ಪುರುಷರ ವಿಭಾಗದಲ್ಲಿ ಸಿಎಆರ್ ಕಾನ್‌ಸ್ಟೆಬಲ್ ಮೈಲಾರಿ ಹಾಗೂ ಮಹಿಳಾ ವಿಭಾಗದಲ್ಲಿ ನರಸಿಂಹರಾಜ ಉಪ ವಿಭಾಗದ ಕಾನ್‌ಸ್ಟೆಬಲ್ ಕೆ.ಪಿ.ಉಷಾ ‘ಸರ್ವೋತ್ತಮ ಪ್ರಶಸ್ತಿ’ ಪಡೆದರು.

ಶನಿವಾರ ಸಂಜೆ ನಡೆದ ಕ್ರೀಡಾಕೂಟ ಸಮಾರೋಪ ಸಮಾರಂಭದಲ್ಲಿ ಕರ್ನಾಟಕ ಪೊಲೀಸ್ ಅಕಾಡೆಮಿ ನಿರ್ದೇಶಕ ವಿಪುಲ್‌ಕುಮಾರ್ ವಿಜೇತರಿಗೆ ಬಹುಮಾನ ವಿತರಿಸಿದರು. ನಗರ ಪೊಲೀಸ್ ಆಯುಕ್ತ ಡಾ.ಎ.ಸುಬ್ರಮಣ್ಯೇಶ್ವರ ರಾವ್, ಡಿಸಿಪಿಗಳಾದ ಎನ್.ವಿಷ್ಣುವರ್ಧನ, ಡಾ.ವಿಕ್ರಂ ವಿ.ಅಮಟೆ, ಚೆನ್ನಯ್ಯ ಭಾಗವಹಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.