
ನಂಜನಗೂಡು: ತಾಲ್ಲೂಕಿನ ವರುಣ ಕ್ಷೇತ್ರದ ಕೊಂಬಾಲ ಗ್ರಾಮ ಸೇರಿದಂತೆ 4 ಗ್ರಾಮಗಳ ಪರಿಶಿಷ್ಟ ಪಂಗಡಕ್ಕೆ ಸೇರಿದ ಫಲಾನುಭವಿ ಮಹಿಳೆಯರಿಗೆ ಸಹಕಾರ ಕುಕ್ಕಟ ಮಹಾಮಂಡಳದ ವತಿಯಿಂದ ತಲಾ 20 ನಾಟಿ ಕೋಳಿ ಮರಿಗಳನ್ನು ವಿತರಣೆ ಮಾಡಲಾಗಿದೆ ಎಂದು ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಮೋಹನ್ ಕುಮಾರ್ ತಿಳಿಸಿದರು.
ನಗರದ ಪಶುಪಾಲನಾ ಇಲಾಖೆ ಆವರಣದಲ್ಲಿ ಈಚೆಗೆ ಫಲಾನುಭವಿಗಳಿಗೆ ನಾಟಿ ಕೋಳಿ ಮರಿಗಳನ್ನು ವಿತರಣೆ ಮಾಡಿದ ನಂತರ ಮಾತನಾಡಿದರು.
ತಾಲ್ಲೂಕಿನ ಬಿದರಗೂಡು, ಅಳಗಂಚಿ, ಕಾರ್ಯ ಗ್ರಾಮಗಳ ರೈತ ಮಹಿಳೆಯರಿಗೆ ಕೋಳಿ ಮರಿಗಳನ್ನು ವಿತರಿಸಲಾಗಿದೆ. ರೈತ ಮಹಿಳೆಯರು ಕೃಷಿ ಜೊತೆಗೆ ಪಶುಸಂಗೋಪನೆ ಹಾಗೂ ಕೋಳಿ ಸಾಕಾಣಿಕೆಯಲ್ಲಿ ತೊಡಗುವ ಮೂಲಕ ತಮ್ಮ ಆರ್ಥಿಕ ಪರಿಸ್ಥಿತಿಯನ್ನು ಉತ್ತಮಪಡಿಸಿಕೊಳ್ಳಬಹುದು. ಸರ್ಕಾರ ಸಹಕಾರ ಕುಕ್ಕಟ ಮಹಾಮಂಡಳದ ಮೂಲಕ ಕೋಳಿ ಸಾಕಾಣಿಕೆಯನ್ನು ಪ್ರೋತ್ಸಾಹಿಸಲು ಹಲವು ಕಾರ್ಯಕ್ರಮಗಳನ್ನು ಕೈಂಗೊಂಡಿದೆ’ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅಧಿಕಾರಿಗಳಾದ ಯಮುನಾ, ರವಿ ಕಿರಣ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.