
ಮೈಸೂರು: ‘ಪಿ.ಆರ್. ತಿಪ್ಪೇಸ್ವಾಮಿ ಅವರದ್ದು ನಿಸ್ವಾರ್ಥ, ಸದಾ ಚಲನಶೀಲ ವ್ಯಕ್ತಿತ್ವ’ ಎಂದು ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಆರ್.ಸುನಂದಮ್ಮ ಸ್ಮರಿಸಿದರು.
ಮಾನಸಗಂಗೋತ್ರಿಯ ಬಿಎಂಶ್ರೀ ಸಭಾಂಗಣದಲ್ಲಿ ಮಂಗಳವಾರ ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಹಾಗೂ ಪಿ.ಆರ್.ತಿಪ್ಪೇಸ್ವಾಮಿ ಪೀಠದ ಸಹಯೋಗದಲ್ಲಿ ಜಲವರ್ಣ ಚಿತ್ರ ರಚನಾ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಸಣ್ಣವರು-ದೊಡ್ಡವರು ಎನ್ನುವ ಅಂತರವನ್ನು ಇಟ್ಟುಕೊಳ್ಳದ ವ್ಯಕ್ತಿತ್ವ ಪಿ.ಆರ್.ತಿಪ್ಪೇಸ್ವಾಮಿ ಅವರದು. ಮದುವೆಯಾಗದಿದ್ದರೂ ಹತ್ತಾರು ಮಕ್ಕಳನ್ನು ಸಲಹುತ್ತಿದ್ದರು. ಅವರು ಎಂದಿಗೂ ಶ್ರೀಮಂತರ ಮಗನಾಗಿ ಬದುಕಲಿಲ್ಲ. ಪತ್ರಿಕೆಗಳಿಗೆ ಚಿತ್ರಗಳನ್ನು ಬರೆದು ಬಂದ ಹಣದಿಂದ ಬದುಕು ಕಟ್ಟಿಕೊಂಡರು. ವಾರಾನ್ನದ ಮೂಲಕ ವಿದ್ಯಾಭ್ಯಾಸ ಮುಗಿಸಿ, ಯುವರಾಜ ಕಾಲೇಜಿನಲ್ಲಿ ಸಂಘ ಕಟ್ಟಿ ಜಾನಪದ ಅಧ್ಯಯನ ಪ್ರಾರಂಭಿಸಿದರು’ ಎಂದರು.
ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕಿ ಪ್ರೊ. ಎನ್.ಕೆ. ಲೋಲಾಕ್ಷಿ, ಪಿ.ಆರ್.ತಿಪ್ಪೇಸ್ವಾಮಿ ಪೀಠದ ಸಂದರ್ಶಕ ಪ್ರಾಧ್ಯಾಪಕಿ ಪ್ರೊ.ವಿಜಯಕುಮಾರಿ ಎಸ್.ಕರಿಕಲ್, ಪ್ರಾಧ್ಯಾಪಕರಾದ ಎಚ್.ಎಲ್.ಶೈಲಜಾ, ಪುಟ್ಟನಂಜಯ್ಯ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.