ಮೈಸೂರು: ವಿಧಾನ ಪರಿಷತ್ ಸದಸ್ಯ ಎ.ಎಚ್.ವಿಶ್ವನಾಥ್ ಅವರು ರಚಿಸಿರುವ ‘ಪ್ರಾಚೀನ ಪಾರ್ಲಿಮೆಂಟುಗಳ ಪ್ರದಕ್ಷಿಣೆ’ ಕೃತಿಯ ಬಿಡುಗಡೆ ಕಾರ್ಯಕ್ರಮ ಲಂಡನ್‌ನಲ್ಲಿ ಜುಲೈ 20ರಂದು ನಡೆಯಲಿದೆ.
ಥೇಮ್ಸ್ ನದಿ ದಂಡೆಯ ಬಳಿ ಇರುವ ಬಸವೇಶ್ವರ ಪುತ್ಥಳಿ ಬಳಿ ಕೃತಿಯನ್ನು, ಲಂಡನ್‌ನಲ್ಲಿ ಏಷ್ಯಾ ಮೂಲದ ಮೊದಲ ಮೇಯರ್ ಆಗಿದ್ದ ನೀರಜ್ ಪಾಟೀಲ್ ಬಿಡುಗಡೆ ಮಾಡಲಿದ್ದಾರೆ. ಬೆಂಗಳೂರಿನ ಸೃಷ್ಟಿ ಪ್ರಕಾಶನವು ಕೃತಿ ಪ್ರಕಟಿಸಿದೆ.
‘ಭಾರತ, ಯೂರೋಪ್, ಗ್ರೀಕ್ ಸೇರಿದಂತೆ ವಿಶ್ವದ ವಿವಿಧ ಸಂಸತ್ತುಗಳ ಸ್ವರೂಪ, ಕಾರ್ಯವೈಖರಿಯನ್ನು ವಿವರಿಸಿರುವ ಕೃತಿ ಇದು’ ಎಂದು ವಿಶ್ವನಾಥ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
‘ಅನುಭವ ಮಂಟಪದ ಮೂಲಕ ಜಗತ್ತಿಗೆ ಸಂಸತ್ತಿನ ಪರಿಕಲ್ಪನೆಯನ್ನು ಪರಿಚಯಿಸಿದ ಕಾರಣಕ್ಕೆ ಬಸವಣ್ಣನ ಪುತ್ಥಳಿ ಬಳಿಯೇ ಕೃತಿ ಬಿಡುಗಡೆಯನ್ನು ಆಯೋಜಿಸಲಾಗಿದೆ. ಲಂಡನ್‌ನಲ್ಲಿ ಬಿಡುಗಡೆಯಾಗುತ್ತಿರುವ ಮೊದಲ ಕನ್ನಡ ಕೃತಿ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.