ADVERTISEMENT

ಹುಂಡಿ ಹಣವನ್ನು ಚರ್ಚ್‌, ಮಸೀದಿ ಅಭಿವೃದ್ಧಿಗೆ ಬಳಸಬೇಕೇ: ಪ್ರತಾಪ್ ಸಿಂಹ

​ಪ್ರಜಾವಾಣಿ ವಾರ್ತೆ
Published 3 ಜನವರಿ 2022, 14:15 IST
Last Updated 3 ಜನವರಿ 2022, 14:15 IST
ಪ್ರತಾಪ ಸಿಂಹ
ಪ್ರತಾಪ ಸಿಂಹ   

ಮೈಸೂರು: ‘ಹಿಂದೂಗಳು ನಂಬಿಕೆ ಇಟ್ಟುಕೊಂಡು ದೇಗುಲಕ್ಕೆ ಹೋಗಿ ಹರಕೆ, ಕಾಣಿಕೆ ನೀಡುತ್ತಾರೆ. ಆ ಕಾಣಿಕೆಯನ್ನು ಹಿಂದೂ ದೇಗುಲ ಅಭಿವೃದ್ಧಿಗೇ ಬಳಸಬೇಕು. ಇದಕ್ಕೆ ಯಾವ ದೊಣ್ಣೆ ನಾಯಕರ ಅಪ್ಪಣೆ ಬೇಕು? ಹುಂಡಿ ಹಣವನ್ನು ಚರ್ಚ್‌, ಮಸೀದಿ ಅಭಿವೃದ್ಧಿಗೆ ಬಳಸಬೇಕೇ’ ಎಂದು ಸಂಸದ ಪ್ರತಾಪ್ ಸಿಂಹ ಪ್ರಶ್ನಿಸಿದರು. ‌

ನಗರದಲ್ಲಿ ಸೋಮವಾರ ‌ಸುದ್ದಿಗಾರರೊಂದಿಗೆ ಮಾತನಾಡಿ, ‘ಊರೂರಲ್ಲಿ, ನಾಲ್ಕು ಜನ ಕ್ರೈಸ್ತರು ಇರುವ ಕಡೆಯಲ್ಲಿ ಭವ್ಯವಾದ ಚರ್ಚ್‌ಗಳನ್ನು ನಿರ್ಮಿಸಲಾಗುತ್ತಿದೆ. ಅವರಿಗೆ ದುಡ್ಡು ಎಲ್ಲಿಂದ ಬರುತ್ತಿದೆ? ದೇಗುಲಗಳಲ್ಲಿ ಸಂಗ್ರಹವಾಗಿರುವ ಹಣವನ್ನು ಏಕೆ ಚರ್ಚ್‌ ಅಭಿವೃದ್ಧಿಗೆ ಕೊಡಬೇಕು? ಮಸೀದಿ ನಿರ್ಮಾಣಕ್ಕೆ, ಹಜ್‌ ಯಾತ್ರೆಗೆ, ವಕ್ಫ್‌ ಬೋರ್ಡ್‌ಗೆ ದೇಗುಲದ ಹಣವನ್ನೇಕೆ ನೀಡಬೇಕು’ ಎಂದು ಕೇಳಿದರು.

‘ಹೀಗಾಗಿಯೇ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದೇಗುಲಗಳ ಹುಂಡಿಗಳಲ್ಲಿ ಸಂಗ್ರಹವಾಗುತ್ತಿರುವ ಹಣವನ್ನು ದೇಗುಲಗಳ ಅಭಿವೃದ್ಧಿಗೆ ಬಳಕೆ ಮಾಡಲು, ಸರ್ಕಾರದ ಹಿಡಿತವನ್ನು ಸಡಿಲಗೊಳಿಸಿ ಜನರಿಗೆ ಕೈಗೆ ನೀಡಲು ಮುಂದಾಗಿದ್ದಾರೆ’ ಎಂದು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.