ADVERTISEMENT

ಹುಣಸೂರು: ಉತ್ತರ ಪ್ರದೇಶ ಘಟನೆ ಖಂಡಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2020, 1:42 IST
Last Updated 7 ಅಕ್ಟೋಬರ್ 2020, 1:42 IST
ಹುಣಸೂರು ನಗರದ ಕಲ್ಪತರು ವೃತ್ತದಲ್ಲಿ ದಲಿತ ಹಕ್ಕುಗಳ ಸಮಿತಿ ಸದಸ್ಯರು ಮಂಗಳವಾರ ಉತ್ತರಪ್ರದೇಶದ ಅತ್ಯಾಚಾರ ಖಂಡಿಸಿ ಪ್ರತಿಭಟಿಸಿದರು
ಹುಣಸೂರು ನಗರದ ಕಲ್ಪತರು ವೃತ್ತದಲ್ಲಿ ದಲಿತ ಹಕ್ಕುಗಳ ಸಮಿತಿ ಸದಸ್ಯರು ಮಂಗಳವಾರ ಉತ್ತರಪ್ರದೇಶದ ಅತ್ಯಾಚಾರ ಖಂಡಿಸಿ ಪ್ರತಿಭಟಿಸಿದರು   

ಹುಣಸೂರು: ಉತ್ತರಪ್ರದೇಶದ ಹಥರಾಸ್ ಜಿಲ್ಲೆಯಲ್ಲಿ ನಡೆದ ಅಮಾನವೀಯ ಘಟನೆಯನ್ನು ಖಂಡಿಸಿ ಕರ್ನಾಟಕ ದಲಿತ ಹಕ್ಕುಗಳ ಸಮಿತಿ ಸದಸ್ಯರು ನಗರದ ಕಲ್ಪತರು ವೃತ್ತದಲ್ಲಿ ಪ್ರತಿಭಟಿಸಿದರು.

ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ಬೆಳ್ತೂರು ಮಹದೇವ್ ಮಾತನಾಡಿ, ‘ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿ ಆದಾಗಿನಿಂದಲೂ ಆ ರಾಜ್ಯದಲ್ಲಿ ಪರಿಶಿಷ್ಟ ಹಾಗೂ ತಳ ಸಮುದಾಯಗಳು ನೆಮ್ಮದಿಯ ಜೀವನ ನಡೆಸಲು ಆಗದಂತಾಗಿದೆ. ಮೇಲ್ಪಂಕ್ತಿ ಜನರಿಂದ ನಿತ್ಯ ಒಂದಲ್ಲಾ ಒಂದು ರೀತಿ ದೌರ್ಜನ್ಯ ನಡೆದಿದ್ದರೂ ಸರ್ಕಾರ ಮೌನವಹಿಸಿದ್ದರ ಫಲವೇ ಹಾಥರಸ್ ಜಿಲ್ಲೆಯ ಸಾಮೂಹಿಕ ಅತ್ಯಾಚಾರಕ್ಕೆ ಕಾರಣ’ ಎಂದು ಆರೋಪಿಸಿದರು.

ಪ್ರತಿಭಟನೆಯಲ್ಲಿ ಸಮಿತಿ ತಾಲ್ಲೂಕು ಘಟಕದ ಸಂಚಾಲಕ ತಮ್ಮಡಹಳ್ಳಿ ಮಹದೇವ್, ಆದಿಜಾಂಬವ ಸಮುದಾಯದ ಜೆ.ಮಹದೇವ್, ಸಿಪಿಎಂ ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜ್ ಕಲ್ಕುಣಿಕೆ ಮಾತನಾಡಿದರು.

ADVERTISEMENT

ಕಾಂತರಾಜ್, ಉದಯಕುಮಾರ್, ಮಹದೇವ್, ಕಿರಿಜಾಜಿ ಲೋಕೇಶ್ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.