ADVERTISEMENT

ಮೇಲುಕೋಟೆ: ರಾಜಮುಡಿ ಕಿರೀಟ ಖಜಾನೆಗೆ

ಮೇಲುಕೋಟೆ ಕಾರ್ತೀಕ ಬ್ರಹ್ಮೋತ್ಸವ ಸಮಾಪ್ತಿ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2020, 5:20 IST
Last Updated 29 ನವೆಂಬರ್ 2020, 5:20 IST
ಮೇಲುಕೋಟೆಯ ರಾಜಮುಡಿ ತಿರುವಾಭರಣಪೆಟ್ಟಿಗೆಯನ್ನು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್, ಉಪವಿಭಾಗಾಧಿಕಾರಿ ಶಿವಾನಂದಮೂರ್ತಿ ಒಳಪ್ರಾಕಾರದ ಪ್ರದಕ್ಷಿಣೆಯೊಂದಿಗೆ ಕೊಂಡೊಯ್ದು ವಾಹನದಲ್ಲಿಟ್ಟು ಪೊಲೀಸ್‌ ಭದ್ರತೆಯೊಂದಿಗೆ ಜಿಲ್ಲಾ ಖಜಾನೆಗೆ ಕಳುಹಿಸಿಕೊಟ್ಟರು
ಮೇಲುಕೋಟೆಯ ರಾಜಮುಡಿ ತಿರುವಾಭರಣಪೆಟ್ಟಿಗೆಯನ್ನು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್, ಉಪವಿಭಾಗಾಧಿಕಾರಿ ಶಿವಾನಂದಮೂರ್ತಿ ಒಳಪ್ರಾಕಾರದ ಪ್ರದಕ್ಷಿಣೆಯೊಂದಿಗೆ ಕೊಂಡೊಯ್ದು ವಾಹನದಲ್ಲಿಟ್ಟು ಪೊಲೀಸ್‌ ಭದ್ರತೆಯೊಂದಿಗೆ ಜಿಲ್ಲಾ ಖಜಾನೆಗೆ ಕಳುಹಿಸಿಕೊಟ್ಟರು   

ಮೇಲುಕೋಟೆ: ನ.17ರಿಂದ ನಡೆಯು ತ್ತಿದ್ದ ಹತ್ತು ದಿನಗಳ ಕಾರ್ತೀಕ ಮಾಸದ ರಾಜಮುಡಿ ಬ್ರಹ್ಮೋತ್ಸವ ತೆರೆಕಂಡಿದೆ.

ರಾಜಮುಡಿ ಬ್ರಹ್ಮೋತ್ಸವ ಪುಷ್ಪಯಾಗದೊಂದಿಗೆ ಮುಕ್ತಾಯವಾ ಗಿದ್ದು, ಶನಿವಾರ ರಾಜಮುಡಿ ತಿರುವಾಭರಣ ಪೆಟ್ಟಿಗೆಯನ್ನು ಜಿಲ್ಲಾ ಖಜಾನೆಗೆ ಮರಳಿಸಲಾಯಿತು.

ಮಂಡ್ಯ ಜಿಲ್ಲಾಧಿಕಾರಿ ಡಾ.ಎಂ.ವಿ ವೆಂಕಟೇಶ್ ಸಮಕ್ಷಮ, ಉತ್ಸವಕ್ಕಾಗಿ ಸ್ಥಾನೀಕರು ಅರ್ಚಕರು, ಪರಿಚಾರಕರು ಮತ್ತು ಕಾವಲುಗಾರರ ವಶಕ್ಕೆ ನೀಡಿದ್ದ ರಾಜಮುಡಿ ಹಾಗೂ 15 ಆಭರಣಗಳನ್ನು ಪರಿಶೀಲಿಸಿ ಮೊಹರು ಮಾಡಲಾಯಿತು.

ADVERTISEMENT

ಪಲ್ಲಕ್ಕಿ ಉತ್ಸವ ಇಲ್ಲದ ಕಾರಣ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕ ಟೇಶ್, ಉಪವಿಭಾಗಾಧಿಕಾರಿ ಶಿವಾನಂದ ಮೂರ್ತಿ ತಿರುವಾಭರಣಪೆಟ್ಟಿಗೆಯನ್ನು ಒಳಪ್ರಾಕಾರದ ಪ್ರದಕ್ಷಿಣೆಯೊಂದಿಗೆ ಕೊಂಡೊಯ್ದು ವಾಹನದಲ್ಲಿಟ್ಟರು.

ಈ ವೇಳೆ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಮಂಗಳಮ್ಮ, ಪಾಂಡವಪುರ ತಹಶೀಲ್ದಾರ್ ಪ್ರಮೋದ್ ಪಾಟೀಲ್ ಇದ್ದರು.

ಕೊರೊನಾ ನಡುವೆಯೂ ಮೈಸೂರು ಅರಸರ ಹೆಸರಲ್ಲಿ ನಡೆಯುವ ರಾಜಮುಡಿ ಬ್ರಹ್ಮೋತ್ಸವ ಮತ್ತು ರಾಜಮುಡಿ ಉತ್ಸವ ನಡೆಯಲು ಅವಕಾಶ ಮಾಡಿಕೊಟ್ಟ ಜಿಲ್ಲಾಧಿಕಾರಿ ಡಾ.ಎಂ.ವಿ ವೆಂಕಟೇಶ್ ಅವರಿಗೆ ಕೈಂಕರ್ಯಪರರು ಕೃತಜ್ಞತೆ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.