ADVERTISEMENT

ಮೈಸೂರು | ಕಲೆ, ಸಾಹಿತ್ಯಕ್ಕೆ ರಾಜೇಂದ್ರಶ್ರೀ ಪ್ರೋತ್ಸಾಹ: ತೋಂಟದಾರ್ಯ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2025, 7:06 IST
Last Updated 11 ಸೆಪ್ಟೆಂಬರ್ 2025, 7:06 IST
<div class="paragraphs"><p>ಮೈಸೂರಿನ ಜೆಎಸ್‌ಎಸ್‌ ಮಹಿಳಾ ಕಾಲೇಜಿನಲ್ಲಿ ಬುಧವಾರ ಜೆಎಸ್‌ಎಸ್‌ ಮಹಿಳಾ ಶಿಕ್ಷಣ ಸಂಸ್ಥೆಗಳು ಆಯೋಜಿಸಿದ್ದ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರ 110ನೇ ಜಯಂತಿಯಲ್ಲಿ ಬಿಜೆಪಿ ಮುಖಂಡ ತೋಂಟದಾರ್ಯ ಅವರು ಪುಷ್ಪನಮನ ಸಲ್ಲಿಸಿದರು.</p></div>

ಮೈಸೂರಿನ ಜೆಎಸ್‌ಎಸ್‌ ಮಹಿಳಾ ಕಾಲೇಜಿನಲ್ಲಿ ಬುಧವಾರ ಜೆಎಸ್‌ಎಸ್‌ ಮಹಿಳಾ ಶಿಕ್ಷಣ ಸಂಸ್ಥೆಗಳು ಆಯೋಜಿಸಿದ್ದ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರ 110ನೇ ಜಯಂತಿಯಲ್ಲಿ ಬಿಜೆಪಿ ಮುಖಂಡ ತೋಂಟದಾರ್ಯ ಅವರು ಪುಷ್ಪನಮನ ಸಲ್ಲಿಸಿದರು.

   

ಮೈಸೂರು: ‘ವಿದ್ಯಾರ್ಥಿಗಳಿಗೆ ಅನ್ನ, ಅಕ್ಷರ ದಾಸೋಹ ನೀಡುವ ಜೊತೆಗೆ ಕಲೆ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಕ್ಷೇತ್ರಕ್ಕೂ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರು ಪ್ರೋತ್ಸಾಹ ನೀಡಿದರು’ ಎಂದು ಬಿಜೆಪಿ ಮುಖಂಡ ತೋಂಟದಾರ್ಯ ಹೇಳಿದರು. 

ಸರಸ್ವತಿಪುರಂನ ಜೆಎಸ್‌ಎಸ್‌ ಮಹಿಳಾ ಕಾಲೇಜಿನಲ್ಲಿ ಬುಧವಾರ ಜೆಎಸ್‌ಎಸ್‌ ಮಹಿಳಾ ಶಿಕ್ಷಣ ಸಂಸ್ಥೆಗಳು ಆಯೋಜಿಸಿದ್ದ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರ 110ನೇ ಜಯಂತಿ ಉದ್ಘಾಟಿಸಿ ಮಾತನಾಡಿದರು. 

ADVERTISEMENT

‘ರಾಜೇಂದ್ರ ಶ್ರೀ ಕಾಶಿಗೆ ವಿದ್ಯಾಭ್ಯಾಸಕ್ಕೆ ಹೋಗಿದ್ದಾಗ ಅಲ್ಲಿನ ಗೌರಿಶಂಕರ ಸ್ವಾಮೀಜಿ ಅವರು ಮೈಸೂರಿನಲ್ಲಿದ್ದುಕೊಂಡೇ ಸಾವಿರಾರು ಮಂದಿಗೆ ಶಿಕ್ಷಣ ನೀಡಿರೆಂದು ಸಲಹೆ ನೀಡಿದ್ದರು. ಅದರಂತೆ ನಾಡಿನಲ್ಲಿ ಶಿಕ್ಷಣ ಕ್ರಾಂತಿ ನಡೆಯಲು ಕಾರಣರಾದರು’ ಎಂದು ಹೇಳಿದರು. 

‘ಜನರಿಗೆ ಧರ್ಮ– ಸಂಸ್ಕೃತಿ ತಿಳಿಸಲು ಶಿವರಾತ್ರೀಶ್ವರ ಧಾರ್ಮಿಕ ದತ್ತಿ, ಶರಣ ಸಾಹಿತ್ಯ ಪರಿಷತ್ತು, ಸಂಸ್ಕೃತ ಪಾಠಶಾಲೆಗಳು ತೆರೆದರು. ವ್ಯಕ್ತಿ ಆರೋಗ್ಯಕರವಾಗಿ ಬೆಳೆಯಲು ಎಲ್ಲ ಅನುಕೂಲವನ್ನು ಮಾಡಿಕೊಟ್ಟರು. ಎಲ್ಲ ಸಮುದಾಯದ ಮಕ್ಕಳು ಮಠ ಹಾಗೂ ವಿದ್ಯಾಪೀಠದ ಆಶ್ರಯದಲ್ಲಿ ಶಿಕ್ಷಣ ಪಡೆದರು’ ಎಂದರು.

‘ದುಡಿಯುವವರಿಗೆ ತಾಂತ್ರಿಕ ಶಿಕ್ಷಣ ಸಿಗಲೆಂದು ಐಟಿಐ, ಪಾಲಿಟೆಕ್ನಿಕ್‌ಗಳನ್ನು ತೆರೆದರು. ಆರೋಗ್ಯ ಸಮಸ್ಯೆಗಳಿಗೆ ಸ್ಪಂದಿಸಲು ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆ ಆರಂಭಿಸಿದರು’ ಎಂದು ತಿಳಿಸಿದರು. 

ಜೆಎಸ್‌ಎಸ್‌ ಪ್ರಸಾದ ನಿಲಯಗಳ ಹಿರಿಯ ವಿದ್ಯಾರ್ಥಿಗಳ ಸಂಘದ ನಿರ್ದೇಶಕ ವಿ.ಮಲ್ಲಿಕಾರ್ಜುನಸ್ವಾಮಿ ದುಗ್ಗಟ್ಟಿ, ಮುಖ್ಯ ನಿಲಯ ಪಾಲಕಿ ಮಮತಾ ಸುರೇಶ್, ಶಿವಸ್ವಾಮಿ, ಗುರುಸ್ವಾಮಿ, ಡಿ.ಆರ್.ಕವಿತಾ ಪಾಲ್ಗೊಂಡಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.