ADVERTISEMENT

ಮೈಸೂರು: ನಗರದಲ್ಲಿ ರಾಮ್‌ರಾಜ್‌ ಮಳಿಗೆ ಆರಂಭ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2020, 1:55 IST
Last Updated 2 ಅಕ್ಟೋಬರ್ 2020, 1:55 IST
ನಗರದ ಸರಸ್ವತಿಪುರಂನ ಕಾಂತರಾಜ್ ಅರಸ್ ರಸ್ತೆ, ಚಾಮರಾಜ ಮೊಹಲ್ಲಾ ಇಲ್ಲಿ ನೂತನವಾಗಿ ಆರಂಭಗೊಂಡಿರುವ ರಾಮ್‌ರಾಜ್ ಕಾಟನ್‌ ಮಳಿಗೆಯನ್ನು ಪಾಲಿಕೆ ಸದಸ್ಯ ಎಂ.ಶಿವಕುಮಾರ್ ಗುರುವಾರ ಉದ್ಘಾಟಿಸಿದರು
ನಗರದ ಸರಸ್ವತಿಪುರಂನ ಕಾಂತರಾಜ್ ಅರಸ್ ರಸ್ತೆ, ಚಾಮರಾಜ ಮೊಹಲ್ಲಾ ಇಲ್ಲಿ ನೂತನವಾಗಿ ಆರಂಭಗೊಂಡಿರುವ ರಾಮ್‌ರಾಜ್ ಕಾಟನ್‌ ಮಳಿಗೆಯನ್ನು ಪಾಲಿಕೆ ಸದಸ್ಯ ಎಂ.ಶಿವಕುಮಾರ್ ಗುರುವಾರ ಉದ್ಘಾಟಿಸಿದರು   

ಮೈಸೂರು: ನಗರದ ಸರಸ್ವತಿಪುರಂನ ಕಾಂತರಾಜ ಅರಸ್ ಮುಖ್ಯ ರಸ್ತೆ, ಚಾಮರಾಜ ಮೊಹಲ್ಲಾದಲ್ಲಿ ರಾಮ್‌ ರಾಜ್ ಕಾಟನ್ ಕಂಪನಿಯ ನೂತನ ಮಳಿಗೆಯನ್ನುತೆರೆಯಲಾಗಿದೆ. ‌

ಮಳಿಗೆಯನ್ನು ಪಾಲಿಕೆ ಸದಸ್ಯ ಎಂ.ಶಿವಕುಮಾರ್ ಗುರುವಾರ ಉದ್ಘಾಟಿಸಿದರು.

ದಕ್ಷಿಣ ಭಾರತದಲ್ಲಿ ರಾಮ್‌ರಾಜ್‌ ಕಾಟನ್‌ ಕಂಪನಿಯು ಷರ್ಟ್‌, ಪಂಚೆ,ಬನಿಯನ್‌ ಮಾರಾಟದಲ್ಲಿ ಮುಂಚೂಣಿಯಲ್ಲಿದೆ. ಗ್ರಾಹಕರ ವಿಶ್ವಾಸಾರ್ಹತೆ ಗಳಿಸಿದೆ. ಆಕರ್ಷ ಣೀಯಬಿಳಿಉಡುಪುಗಳ ಜೊತೆಗೆ ಸಂಪ್ರದಾಯ ಹಾಗೂ ಸಂಸ್ಕೃತಿಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಕರ್ನಾಟಕದ ಹಲವೆಡೆ ಮಳಿಗೆ ತೆರೆದಿದೆ. ಅಲ್ಲದೇ, www.ram rajcotton.in ಮೂಲಕ ಆನ್‌ ಲೈನ್‌ನಲ್ಲೂ ಮಾರಾಟ ಮಾಡುತ್ತಿದೆ. ಶ್ರೀಲಂಕಾ, ಸಿಂಗಪುರ, ಮಲೇಷ್ಯಾ ಸೇರಿದಂತೆ ಹಲವು ದೇಶಗಳಿಗೆ ರಫ್ತು ಮಾಡಲಾಗುತ್ತಿದೆ. ವೈರಾಣು ಸೋಂಕು ಹರಡದಂತೆ ನೋಡಿಕೊಂಡು, ರಕ್ಷಣೆ ನೀಡು ವಂಥಪಂಚೆಗಳನ್ನುತಯಾ ರಿಸಲಾಗಿದೆ ಎಂದು ಕಂಪೆನಿ ಪ್ರಕಟಣೆ ಹೇಳಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.