
ಪ್ರಜಾವಾಣಿ ವಾರ್ತೆ
ತಿ. ನರಸೀಪುರ: ಕರ್ನಾಟಕ ದಲಿತ ಸಂಘರ್ಷ ಸಮಿತಿಯ (ಎನ್.ಮೂರ್ತಿ ಸ್ಥಾಪಿತ) ಸಂಚಾಲಕ ತಾಲ್ಲೂಕಿನ ಮೂಗೂರು ನಿವಾಸಿ ಬಲ್ಲಯ್ಯ ಹಾಗೂ ರಾಧಾ ದಂಪತಿಯ ಪುತ್ರರಿಬ್ಬರು ಗಣರಾಜ್ಯೋತ್ಸವ ಪರೇಡ್‌ನಲ್ಲಿ ಭಾಗವಹಿಸಲು ಅವಕಾಶ ಪಡೆದಿದ್ದಾರೆ.
ಮೈಸೂರಿನ ಮಹಾಜನ ಕಾಲೇಜಿನಲ್ಲಿ ಬಿ.ಎ ಪದವಿ ವ್ಯಾಸಾಂಗ ಮಾಡುತ್ತಿರುವ ಹರಿವೀರೇಂದ್ರ ಸಿಂಹ ದೆಹಲಿಯ ಕೆಂಪುಕೋಟೆಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಎನ್‌ಸಿಸಿ ವತಿಯಿಂದ ಭಾಗವಹಿಸುತ್ತಿದ್ದು, ಮತ್ತೊಬ್ಬ ಸಹೋದರ ಯುವರಾಜ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಬಿ. ಹರ ಬಸವೇಶ್ವರ ಎನ್‌ಎಸ್‌ಎಸ್ ವತಿಯಿಂದ ರಾಜ್ಯದ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಭಾಗವಹಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.