ಮೈಸೂರು: ಇಲ್ಲಿನ ಶಾಂತಿನಗರದಲ್ಲಿ ಬುಧವಾರ ಶಿಥಿಲವಾಗಿದ್ದ ಮನೆಯೊಂದರ ಚಾವಣಿ ಕುಸಿದು ಜಾಕೀರ್ ಅಲಿಖಾನ್ ಪುತ್ರ ಫಾರೂಕ್ ಅಲಿಖಾನ್ (8) ಮೃತಪಟ್ಟಿದ್ದಾನೆ.
ಬಾಲಕ ಮಂಚದ ಮೇಲೆ ಮಲಗಿದ್ದಾಗ ಚಾವಣಿ ಕುಸಿದಿದೆ. ಅವಶೇಷಗಳು ತಲೆಯ ಮೇಲೆ ಬಿದ್ದಿದ್ದರಿಂದ ತೀವ್ರ ಸ್ವರೂಪದ ಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.