ADVERTISEMENT

ಸಲೂನ್ ಗುರು ಆ್ಯಪ್ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2020, 8:22 IST
Last Updated 19 ಸೆಪ್ಟೆಂಬರ್ 2020, 8:22 IST

ಮೈಸೂರು: ಕೌಶಿಕ್ ಅಭಿವೃದ್ಧಿಗೊಳಿಸಿರುವ ಸಲೂನ್ ಗುರು ಆ್ಯಪ್‌ ಅನ್ನು ಶನಿವಾರ ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಜಿ.ಡಿ.ಹರೀಶ್‌ಗೌಡ ಬಿಡುಗಡೆಗೊಳಿಸಿದರು.

ಮೈಸೂರಿಗೆ ಸೀಮಿತವಾದ ಈ ಆ್ಯಪ್‌ನಲ್ಲಿ ಈಗಾಗಲೇ 13 ಸಲೂನ್‌ಗಳು ನೋಂದಣಿಯಾಗಿವೆ. ಗ್ರಾಹಕರು ಈ ಆ್ಯಪ್ ಮೂಲಕ ಸಮಯ ನಿಗದಿ ಪಡಿಸಿಕೊಂಡು ಹೇರ್ ಕಟಿಂಗ್, ಶೇವ್ ಮಾಡಿಸಿಕೊಳ್ಳಲು ಹೋಗಬಹುದಾಗಿದೆ. ₹ 100ರಿಂದಲೂ ಸೇವೆ ಲಭ್ಯವಿದೆ.

ಆ್ಯಪ್ ಬಿಡುಗಡೆ ಮಾಡಿದ ಹರೀಶ್‌ಗೌಡ ಮಾತನಾಡಿ, ‘ಈ ಆ್ಯಪ್ ಡಿಜಿಟಲೀಕರಣದ ಕೊಂಡಿಯಾಗಲಿದೆ. ಸಂಕಷ್ಟಕ್ಕೆ ಸಿಲುಕಿರುವ ಸವಿತಾ ಸಮಾಜದ ನೆರವಿಗೆ ಬರಲಿದೆ. ಕೋವಿಡ್‌ನಿಂದ ದೂರವಿರಲು ಇದು ಸಹಕಾರಿಯಾಗಿದೆ’ ಎಂದರು.

ADVERTISEMENT

ಸಮಾಜ ಸೇವಕ ರಾಘವನ್ ಮಾತನಾಡಿ, ‘ಎಲ್ಲರೂ ಸ್ವಾವಲಂಬಿಗಳಾಗಬೇಕು. ತಾಂತ್ರಿಕ ಪರಿಣತಿ ಗಳಿಸಿದಾಗ ಮಾತ್ರ ಪ್ರಗತಿ ಸಾಧ್ಯ’ ಎಂದರು.

ಸುನೀಲ್ ಚಿಲಪ್ಲಿಂಕರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.