ADVERTISEMENT

ಸರಗೂರು | ಗಂಡು ಆನೆ ಸೆರೆ: ರಾಮಪುರ ಸಾಕಾನೆ ಶಿಬಿರಕ್ಕೆ ರವಾನೆ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2026, 6:12 IST
Last Updated 13 ಫೆಬ್ರುವರಿ 2026, 6:12 IST
ಸೆರೆ ಸಿಕ್ಕ ಆನೆ
ಸೆರೆ ಸಿಕ್ಕ ಆನೆ   

ಸರಗೂರು: ರೈತರ ಬೆಳೆಗಳಿಗೆ ಹಾನಿ ಮಾಡಿ ಹಾಡಿ ನಿವಾಸಿ ಮಾದ ಎಂಬುವರ ಬಲಿ ಪಡೆದಿದ್ದ 35 ವರ್ಷದ ಗಂಡಾನೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.

ಗುರುವಾರ ಬೆಳಗ್ಗೆ ಕಾಡಾನೆ ಮಠದಕಟ್ಟೆ, ಕಾಟವಾಳು ಗ್ರಾಮದ ಜಮೀನಿನಲ್ಲಿದ್ದಾಗ ದುಬಾರಿ ಸಾಕಾನೆ ಶಿಬಿರದ ಏಕಲವ್ಯ, ಸುಗ್ರೀವ, ಪ್ರಶಾಂತ, ಅಯ್ಯಪ್ಪ ಆನೆಗಳ ಸಹಾಯದಿಂದ ಅರಿವಳಿಕೆ ಚುಚ್ಚುಮದ್ದು ನೀಡಿ ಸೆರೆ ಹಿಡಿಯಲಾಗಿದ್ದು, ರಾಮಪುರ ಸಾಕಾನೆ ಶಿಬಿರಕ್ಕೆ ಬಿಡಲಾಗಿದೆ.

ಬಂಡೀಪುರ ಸಿಎಫ್ ಪ್ರಭಾಕರನ್ ನೇತೃತ್ವದಲ್ಲಿ ಯಡಿಯಾಲ ಎಸಿಎಫ್ ಡಿ.ಪರಮೇಶ್ ಅವರ ಮಾರ್ಗದರ್ಶನದಲ್ಲಿ ತಜ್ಞ ಡಾ.ವಾಸೀಂ ಮಿರ್ಜಾ ಅವರು ಆನೆಗೆ ಅರವಳಿಕೆ ಚುಚ್ಚುಮದ್ದು ನೀಡಿದ್ದಾರೆ.

ADVERTISEMENT

ಸೆರೆ ಸಿಕ್ಕ ಆನೆಗೆ ಬಲದ ಕಣ್ಣಿಗೆ ಪೆಟ್ಟಾಗಿದ್ದು, ಬಲದ ಕಣ್ಣು ಕಾಣಿಸುತ್ತಿಲ್ಲ. ಕಾಡಾನೆ ದಾಳಿಯಿಂದಾಗಿ ಸಣ್ಣಪುಟ್ಟ ಗಾಯಗಳಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೊಳೆಯೂರು ಆರ್‌ಎಫ್‌ಒ ನಾರಾಯಣ್, ಗುಂಡ್ರೆ ಆರ್‌ಎಫ್‌ಒ ಅಮೃತೇಶ್, ನುಗು ಆರ್‌ಎಫ್‌ಒ ಅನಿತ್‌ರಾಜ್, ಯಡಿಯಾಲ ಆರ್‌ಎಫ್‌ಒ ಕೃಷ್ಣ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.