ADVERTISEMENT

ಮತ್ತೆ 35 ಶಾಲೆಗಳು ಪ್ರೌಢಶಾಲೆಗಳಾಗಿ ಮೇಲ್ದರ್ಜೆಗೆ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2025, 2:28 IST
Last Updated 17 ಸೆಪ್ಟೆಂಬರ್ 2025, 2:28 IST
<div class="paragraphs"><p>ಶಾಲೆ</p></div>

ಶಾಲೆ

   

(ಸಾಂಕೇತಿಕ ಚಿತ್ರ)

ಮೈಸೂರು: ರಾಜ್ಯ ಸರ್ಕಾರವು ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ 147 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳನ್ನು ಪ್ರೌಢಶಾಲೆಗಳನ್ನಾಗಿ ಉನ್ನತೀಕರಿಸಿದ ಬೆನ್ನಲ್ಲೇ ಮತ್ತೆ 35 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳನ್ನು ಉನ್ನತೀಕರಿಸಿ ಮಂಗಳವಾರ ಆದೇಶ ಹೊರಡಿಸಿದೆ.

ADVERTISEMENT

ಚಾಲ್ತಿಯಲ್ಲಿರುವ ನಿಯಮಗಳಿಗೆ ಒಳಪಟ್ಟು,  ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಗೆ ಒದಗಿಸಿರುವ ಅನುದಾನದಡಿ ಶಾಲೆಗಳನ್ನು ಉನ್ನತೀಕರಿಸಿ ಪಟ್ಟಿ ಬಿಡುಗಡೆ ಮಾಡಿದೆ. ಆದೇಶದ ಪ್ರತಿ ‘ಪ್ರಜಾವಾಣಿ’ಗೆ ಲಭಿಸಿದೆ.

1ರಿಂದ 7ನೇ ತರಗತಿಯವರೆಗೆ 150ಕ್ಕಿಂತ ಹೆಚ್ಚಿನ ದಾಖಲಾತಿ ಇರುವುದು, 5 ಕಿ.ಮೀ. ವ್ಯಾಪ್ತಿಯೊಳಗೆ ಪ್ರೌಢಶಾಲೆಗಳಿಲ್ಲದಿರುವುದು, ಅಗತ್ಯ ಮೂಲಸೌಕರ್ಯಗಳಿರುವುದನ್ನು ಪರಿಗಣಿಸಿ ಉನ್ನತೀಕರಿಸಲು ಶಾಲಾ ಶಿಕ್ಷಣ ಸಚಿವರು ಸೂಚಿಸಿದ್ದರು.

ಮೊದಲಿಗೆ, ಆಗಸ್ಟ್‌ 7ರಂದು 147 ಉನ್ನತೀಕರಿಸಿದ ಪ್ರೌಢಶಾಲೆಗಳ ಪೈಕಿ 65 ಸರ್ಕಾರಿ ಶಾಲೆಗಳಿಗೆ ಸಿಎಸ್‌ಆರ್‌ ಅನುದಾನ, 76 ಶಾಲೆಗಳಿಗೆ (ಸಿಎಸ್‌ಆರ್‌ ರಹಿತ) ಹಾಗೂ 6 ಸರ್ಕಾರಿ ಶಾಲೆಗಳನ್ನು ಕೇಂದ್ರ ಶಿಕ್ಷಣ ಸಚಿವಾಲಯದ ಅನುದಾನಕ್ಕೆ ಸೇರಿಸಿ, ಅನುಮೋದನೆ ನೀಡಲಾಗಿದೆ. ಚಿಕ್ಕಮಗಳೂರು ತಾಲ್ಲೂಕಿನ ಗುಡ್ಡಗಾಡು ಪ್ರದೇಶದ ಕುಗ್ರಾಮ, ಹಂಗರವಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ಈ ಬಾರಿ ಪ್ರೌಢಶಾಲೆಯಾಗಿ ಉನ್ನತಿ ಭಾಗ್ಯ ಕಂಡಿದೆ. 

ಮಕ್ಕಳ ಕೊರತೆಯಾಗಿ ಬಾಗಿಲುಮುಚ್ಚುವ ಹಂತದಲ್ಲಿದ್ದ ಶಾಲೆಯನ್ನು ಗ್ರಾಮಸ್ಥರು ಉಳಿಸಿ, ಮಾದರಿ ಶಾಲೆಯಾಗಿ ಬೆಳೆಸಿದ ಯಶೋಗಾಥೆ ಕುರಿತು ‘ಒಂದು ಸರ್ಕಾರಿ ಶಾಲೆ ಉಳಿದು ಬೆಳೆದ ಕತೆ’ ಶೀರ್ಷಿಕೆಯಲ್ಲಿ ‘ಪ್ರಜಾವಾಣಿ’ಯು ಸಾಪ್ತಾಹಿಕ ‘ಭಾನುವಾರ ಪುರವಣಿ’ಯಲ್ಲಿ ಇದೇ ವರ್ಷದ ಜೂನ್‌ 8ರ ಸಂಚಿಕೆಯಲ್ಲಿ ಲೇಖನ ಪ್ರಕಟಿಸಿತ್ತು.

ಮಾದರಿ ಶಾಲೆಯಾಗಿ ಬೆಳೆಯುತ್ತಿರುವ ಹಂಗರವಳ್ಳಿ ಪ್ರಾಥಮಿಕ ಶಾಲೆಗೂ ಸಿಕ್ಕಿದೆ ಸ್ಥಾನಮಾನದಂಡಗಳಿಗೆ ಅನುಗುಣ ವಾಗಿಲ್ಲವೆಂದು ಎರಡು ಶಾಲೆಗಳನ್ನು ಕೈಬಿಡಲಾಗಿದೆ. ಅರ್ಹ 35 ಹಿರಿಯ ಪ್ರಾಥಮಿಕ ಶಾಲೆಗಳನ್ನು ಉನ್ನತೀಕರಿಸಲಾಗಿದೆ. ಇದು ನಿರಂತರ ಪ್ರಕ್ರಿಯೆ
ಕೆ.ವಿ.ತ್ರಿಲೋಕಚಂದ್ರ, ಶಿಕ್ಷಣ ಇಲಾಖೆ ಆಯುಕ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.