ADVERTISEMENT

ಸಮುದಾಯದ ಏಳಿಗೆಗೆ ಸೇವೆ ಸ್ಮರಣೀಯ

​ಪ್ರಜಾವಾಣಿ ವಾರ್ತೆ
Published 2 ಜೂನ್ 2025, 13:39 IST
Last Updated 2 ಜೂನ್ 2025, 13:39 IST
ಮೈಸೂರಿನ ಸರಸ್ವತಿಪುರಂನ ಯೋಗಿ ನಾರಾಯಣ ಬಣಜಿಗ (ಬಲಿಜ) ಸಂಘದ ಹಾಸ್ಟೆಲ್‌ ಖಜಾಂಚಿ ಹಾಗೂ ಆಂತರಿಕ ಲೆಕ್ಕಪರಿಶೋಧಕರಾಗಿ ಕಾರ್ಯನಿರ್ವಹಿಸಿದ ಡಿ. ನಾಗರಾಜ್ ಅವರನ್ನು ಮುಖಂಡರು ಸನ್ಮಾನಿಸಿದರು
ಮೈಸೂರಿನ ಸರಸ್ವತಿಪುರಂನ ಯೋಗಿ ನಾರಾಯಣ ಬಣಜಿಗ (ಬಲಿಜ) ಸಂಘದ ಹಾಸ್ಟೆಲ್‌ ಖಜಾಂಚಿ ಹಾಗೂ ಆಂತರಿಕ ಲೆಕ್ಕಪರಿಶೋಧಕರಾಗಿ ಕಾರ್ಯನಿರ್ವಹಿಸಿದ ಡಿ. ನಾಗರಾಜ್ ಅವರನ್ನು ಮುಖಂಡರು ಸನ್ಮಾನಿಸಿದರು   

ಮೈಸೂರು: ಇಲ್ಲಿನ ಸರಸ್ವತಿಪುರಂನ ಯೋಗಿ ನಾರಾಯಣ ಬಣಜಿಗ (ಬಲಿಜ) ಸಂಘದ ಹಾಸ್ಟೆಲ್‌ ಆವರಣದಲ್ಲಿ ಖಜಾಂಚಿ ಹಾಗೂ ಆಂತರಿಕ ಲೆಕ್ಕಪರಿಶೋಧಕರಾಗಿ ಎರಡು ದಶಕಗಳಿಂದ ಕಾರ್ಯನಿರ್ವಹಿಸಿದ ಡಿ. ನಾಗರಾಜ್ ಅವರನ್ನು ಸನ್ಮಾನಿಸಲಾಯಿತು.

ಈ ವೇಳೆ ಮಾತನಾಡಿದ ಮೈಲ್ಯಾಕ್ ಮಾಜಿ ಅಧ್ಯಕ್ಷ ಎಚ್‌.ಎ. ವೆಂಕಟೇಶ್, ‘ನಾಗರಾಜು ಸಮುದಾಯದ ಏಳಿಗೆಗೆ ಸಲ್ಲಿಸಿರುವ ಸೇವೆ ಅತ್ಯಂತ ಸ್ಮರಣೀಯವಾದುದು. ಅವರು ಪ್ರಾಮಾಣಿಕ, ಪಾರದರ್ಶಕ, ಪ್ರಬುದ್ಧತೆ ಹಾಗೂ ಪಕ್ವತೆಯಿಂದ ಕೆಲಸ ಮಾಡಿದ್ದಾರೆ. ಪ್ರತಿ ತಿಂಗಳ ಲೆಕ್ಕವನ್ನು ಕಾರ್ಯಕಾರಿ ಸಮಿತಿಯ ಮುಂದಿಟ್ಟು ಯಾವುದೇ ಲೋಪವಿಲ್ಲದಂತೆ ನೋಡಿಕೊಂಡಿದ್ದಾರೆ. ಅಪರೂಪದ ವ್ಯಕ್ತಿತ್ವದ ಇಂಥವರು ವ್ಯವಸ್ಥೆಗೆ ಮಾದರಿಯಾಗಿರುತ್ತಾರೆ’ ಎಂದು ಹೇಳಿದರು.

ಸಂಘದ ಕಾರ್ಯದರ್ಶಿ ಎಚ್.ಆರ್. ಗೋಪಾಲಕೃಷ್ಣ, ಅಧ್ಯಕ್ಷ ಎಂ. ನಾರಾಯಣ ಮಾತನಾಡಿದರು.

ADVERTISEMENT

ಉಪಾಧ್ಯಕ್ಷರಾದ ಜಿ. ರಮೇಶ್, ಖಜಾಂಚಿ ಕೆ. ಚಂದ್ರಶೇಖರ್, ನಿರ್ದೇಶಕರಾದ ಎಚ್.ವಿ. ನಾಗರಾಜು, ಬಿ.ಕೆ. ಸುರೇಶ್, ಶ್ರೀನಿವಾಸಮೂರ್ತಿ, ಶ್ರೀರಂಗಪಟ್ಟಣ, ವಸತಿನಿಲಯದ ವ್ಯವಸ್ಥಾಪರಕ ಎಚ್.ಆರ್.ವೆಂಕಟೇಶ್, ನಿಲಯ ಪಾಲಕ ರಾಮಕೃಷ್ಣ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.