ADVERTISEMENT

ವಿಜ್ಞಾನ, ಗಣಿತ ಸ್ಪರ್ಧೆ: ಶಾಸ್ತ್ರಿ ಸ್ಕೂಲ್‌ 17 ವಿದ್ಯಾರ್ಥಿಗಳಿಗೆ ಪ್ರಶಸ್ತಿ

ವಿದ್ಯಾಭಾರತಿ ರಾಜ್ಯಮಟ್ಟದ ವಿಜ್ಞಾನ, ಗಣಿತ ಸ್ಪರ್ಧೆ:

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2025, 7:35 IST
Last Updated 8 ಸೆಪ್ಟೆಂಬರ್ 2025, 7:35 IST
ಹುಣಸೂರು ನಗರದ ಶಾಸ್ತ್ರೀ ಗ್ಲೋಬಲ್‌ ಸ್ಕೂಲ್‌ ವಿದ್ಯಾರ್ಥಿಗಳು ಮೈಸೂರಿನಲ್ಲಿ ಭಾನುವಾರ ಮುಕ್ತಾಯಗೊಂಡ ಮೂರು ದಿನ ನಡೆದ ವಿದ್ಯಾಭಾರತಿ ವಿಜ್ಞಾನ ಸ್ಪರ್ಧೆಯಲ್ಲಿ 17 ವಿದ್ಯಾರ್ಥಿಗಳು ಪ್ರಶಸ್ತಿ ಪಡೆದು ಹೈದರಬಾದ್‌ ನಲ್ಲಿ ನಡೆಯಲಿರುವ ವಲಯ ಮಟ್ಟಕ್ಕೆ ಆಯ್ಕೆಗೊಂಡರು
ಹುಣಸೂರು ನಗರದ ಶಾಸ್ತ್ರೀ ಗ್ಲೋಬಲ್‌ ಸ್ಕೂಲ್‌ ವಿದ್ಯಾರ್ಥಿಗಳು ಮೈಸೂರಿನಲ್ಲಿ ಭಾನುವಾರ ಮುಕ್ತಾಯಗೊಂಡ ಮೂರು ದಿನ ನಡೆದ ವಿದ್ಯಾಭಾರತಿ ವಿಜ್ಞಾನ ಸ್ಪರ್ಧೆಯಲ್ಲಿ 17 ವಿದ್ಯಾರ್ಥಿಗಳು ಪ್ರಶಸ್ತಿ ಪಡೆದು ಹೈದರಬಾದ್‌ ನಲ್ಲಿ ನಡೆಯಲಿರುವ ವಲಯ ಮಟ್ಟಕ್ಕೆ ಆಯ್ಕೆಗೊಂಡರು   

ಹುಣಸೂರು: ರಾಜ್ಯ ಮಟ್ಟದ ವಿದ್ಯಾಭಾರತಿ ವಿಜ್ಞಾನ, ಗಣಿತ ಮತ್ತು ಸಂಸ್ಕೃತಿ ಮಹೋತ್ಸವ ಸ್ಪರ್ಧೆಯಲ್ಲಿ ಹುಣಸೂರು ಶಾಸ್ತ್ರಿ ಗ್ಲೋಬಲ್‌ ಸ್ಕೂಲ್‌ ವಿವಿಧ ವಿಭಾಗದಲ್ಲಿ 17 ವಿದ್ಯಾರ್ಥಿಗಳು ಪ್ರಶಸ್ತಿಪಡೆದು ಹೈದರಬಾದ್‌ನಲ್ಲಿ ಸೆ.18 ರಿಂದ ನಡೆಯಲಿರುವ ವಲಯ ಮಟ್ಟದ ವಿಜ್ಞಾನ, ಗಣಿತ ಸ್ಪರ್ಧೆಗೆ ಆಯ್ಕೆಗೊಂಡಿದ್ದಾರೆ ಎಂದು ಸಂಸ್ಥೆಯ ಕಾರ್ಯದರ್ಶಿ ರಾಧಾಕೃಷ್ಣ ತಿಳಿಸಿದ್ದಾರೆ.

ಮೈಸೂರಿನ ಗೋಪಾಲಸ್ವಾಮಿ ಶಿಶುವಿಹಾರದಲ್ಲಿ ಸೆ. 7 ರಂದು ಸ್ಪರ್ಧೆ ಕೊನೆಗೊಂಡಿದ್ದು, ಈ ವಿಜ್ಞಾನ ಸ್ಪರ್ಧೆಯಲ್ಲಿ ರಾಜ್ಯದ 13 ಜಿಲ್ಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಶಾಸ್ತ್ರಿ ಗ್ಲೋಬಲ್‌ ಸ್ಕೂಲ್‌ ನ 17 ವಿದ್ಯಾರ್ಥಿಗಳು ಪ್ರಶಸ್ತಿ ಪಡೆದಿದ್ದಾರೆ. ಸಂಸ್ಥೆಯ ವಿಜ್ಞಾನ ಶಿಕ್ಷಕ ದಿಲೀಪ್‌ ಅವರ ಕಾರ್ಯಕ್ಷಮತೆಯನ್ನು ಅವರು ಶ್ಲಾಘಿಸಿದ್ದಾರೆ.

ಪ್ರಥಮ ಸ್ಥಾನ  : ರಿತೀಶ್‌ -ವೇದಿಕ್‌ ಗಣಿತ , ಶ್ರೀಶಕ್ತಿ -ವಿಜ್ಞಾನ ಮಾದರಿ , ಹರ್ಷಿತ್‌- ಗಣಿತ ಮಾದರಿ ,ಪ್ರಗತಿ -ವಿಜ್ಞಾನ ಮಾದರಿ, ವರ್ಷಿತಾ -ವಿಜ್ಞಾನ ಮಾದರಿ, ಖುಷ್ಬು -ವಿಜ್ಞಾನ ರಸಪ್ರಶ್ನೆ.

ADVERTISEMENT

ದ್ವಿತಿಯ ಸ್ಥಾನ: ಯೋಗಿತಾ ಶ್ರೀ- ವಿಜ್ಙಾನ ಪಿಪಿಟಿ, ಪ್ರಾರ್ಥನ -ವಿಜ್ಞಾನ ಪ್ರಯೋಗ ಮಾದರಿ, ವಿಭಾ- ಗಣಿತ ಮಾದರಿ, ವೇಗನ – ಗಣಿತ ಮಾದರಿ,ಗಗನ್‌ ನಾಗ್‌,ಭವಿತಾ ಶಂಕರ್‌,ವೇದಾಂತ್‌ - ವೇದಿಕ್‌ ಗಣಿತ ರಸಪ್ರಶ್ನೆ.

ತೃತೀಯ ಬಹುಮಾನ: ರಾಹುಲ್‌ - ವೇದಿಕ್‌ ಗಣಿತ ಪಿಪಿಟಿ, ಪೂರ್ವಿಕಾ – ಆಶುಭಾಷಣ ಸ್ಪರ್ಧೆ,ನಬೀಲಾ- ಗಣಿತ ಮಾದರಿ, ಸಿಂಚನ- ರಾಸಾಯನಿಕ ಶಾಸ್ತ್ರ ಪ್ರಯೋಗ, ಚಂದ್ರೇಗೌಡ – ಜೀವಶಾಸ್ತ್ರ ಪ್ರಯೋಗ, ಓಂಕಾರ್‌ - ಜೇಡಿ ಮಣ್ಣಿನ ಮಾದರಿ ವಿಭಾಗದಲ್ಲಿ ಬಹುಮಾನ ಪಡೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.