ಹುಣಸೂರು: ತಾಲ್ಲೂಕಿನ ಬಿಳಿಕೆರೆ ಹೋಬಳಿ ದೇವಗಳ್ಳಿ ಗ್ರಾಮದ ಅನಿಲ್ ಗೌಡರಿಗೆ ಸೇರಿದ 16 ಕುರಿಗಳು ಏಕಾಏಕಿ ಮೃತಪಟ್ಟಿವೆ. ಬುಧವಾರ ಈ ಘಟನೆ ನಡೆದಿದೆ.
ಎರಡು ದಿನಗಳ ಹಿಂದೆ ಅನಿಲ್ ಅವರ ಫಾರಂನಲ್ಲಿ 7 ಜಾನುವಾರು ಒದ್ದಾಡಿ ಮೃತಪಟ್ಟಿದ್ದವು.
ಮರಣೋತ್ತರ ಪರೀಕ್ಷೆ ನಡೆಸಿದ್ದು, ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.