ADVERTISEMENT

ಜಂಬೂಸವಾರಿ ವೀಕ್ಷಿಸಿದ ಶಿವರಾಜ್‌ ಕುಮಾರ್‌

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2025, 23:22 IST
Last Updated 2 ಅಕ್ಟೋಬರ್ 2025, 23:22 IST
ಮೈಸೂರಿನ ನ್ಯೂ ಸಯ್ಯಾಜಿರಾವ್‌ ರಸ್ತೆಯ ಬದಿಯಲ್ಲಿ ನಟ ಶಿವರಾಜ್‌ ಕುಮಾರ್‌ ಜನರೊಂದಿಗೆ ನಿಂತು ಜಂಬೂ ಸವಾರಿ ಮೆರವಣಿಗೆ ವೀಕ್ಷಿಸಿದರು
ಮೈಸೂರಿನ ನ್ಯೂ ಸಯ್ಯಾಜಿರಾವ್‌ ರಸ್ತೆಯ ಬದಿಯಲ್ಲಿ ನಟ ಶಿವರಾಜ್‌ ಕುಮಾರ್‌ ಜನರೊಂದಿಗೆ ನಿಂತು ಜಂಬೂ ಸವಾರಿ ಮೆರವಣಿಗೆ ವೀಕ್ಷಿಸಿದರು   

ಮೈಸೂರು: ಜಂಬೂ ಸವಾರಿ ಸಾಗುವ ನ್ಯೂ ಸಯ್ಯಾಜಿರಾವ್‌ ರಸ್ತೆಯ ಬದಿಯಲ್ಲಿ ಜನರೊಂದಿಗೆ ನಿಂತು ನಟ ಶಿವರಾಜ್‌ ಕುಮಾರ್‌ ಹಾಗೂ ಪತ್ನಿ ಗೀತಾ ಶಿವರಾಜ್‌ ಕುಮಾರ್‌ ದಂಪತಿ ಮೆರವಣಿಗೆ ವೀಕ್ಷಿಸಿದರು.

ಮೆರವಣಿಗೆ ನೋಡಲು ಬೆಳಿಗ್ಗಿನಿಂದ ಕಾಯುತ್ತಿದ್ದ ಜನ ನೆಚ್ಚಿನ ನಾಯಕನನ್ನು ಕಂಡೊಡನೆ ಜೈಕಾರ ಕೂಗಿದರು. ಅವರತ್ತ ಕೈ ಬೀಸಿ, ನಂತರ ಕೈಯನ್ನು ಎದೆಯ ಹತ್ತಿರಕ್ಕೆ ತಂದ ಶಿವರಾಜ್‌ ಕುಮಾರ್‌ ಸ್ನೇಹದ ನಗೆ ಬೀರಿದರು. ಕಲಾ ತಂಡಗಳ ಬ್ಯಾಂಡ್‌ ಸದ್ದಿಗೆ ಕುಣಿದರು. ಮಳೆಯ ನಡುವೆಯೇ ನಂದಿಕುಣಿತ ಹಾಗೂ ಸ್ತಬ್ಧಚಿತ್ರಗಳನ್ನು ವೀಕ್ಷಿಸಿದರು. ಕಲಾವಿದರು ಹಾಗೂ ಸಾರ್ವಜನಿಕರು ಫೊಟೊ ತೆಗೆಸಿಕೊಳ್ಳಲು ಮುಗಿಬಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT