ADVERTISEMENT

ಸಿಗಂದೂರು ಸೇತುವೆಗೆ ರಾಜಕೀಯ ವ್ಯಕ್ತಿಗಳ ಹೆಸರು‌ ಬೇಡ: ಒತ್ತಾಯ

​ಪ್ರಜಾವಾಣಿ ವಾರ್ತೆ
Published 14 ಜುಲೈ 2025, 7:49 IST
Last Updated 14 ಜುಲೈ 2025, 7:49 IST
ಎಸ್.ಎನ್.ನಾಗರಾಜು
ಎಸ್.ಎನ್.ನಾಗರಾಜು   

ಸರಗೂರು: ‘ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಶರಾವತಿ ನದಿ ಹಿನ್ನೀರಿನಲ್ಲಿ ನೂತನವಾಗಿ ನಿರ್ಮಾಣವಾಗಿರುವ ಸಿಗಂದೂರು ಸೇತುವೆಗೆ ಯಾವುದೇ ರಾಜಕೀಯ ವ್ಯಕ್ತಿಗಳ ಹೆಸರು ಇಡಬಾರದು’ ಎಂದು ಸರಗೂರು ತಾಲ್ಲೂಕು ಆರ್ಯ ಈಡಿಗ ಸಮಾಜದ ತಾಲ್ಲೂಕು ಅಧ್ಯಕ್ಷ ಎಸ್.ಎನ್.ನಾಗರಾಜು ಒತ್ತಾಯಿಸಿದ್ದಾರೆ.

ಸೇತುವೆಗೆ ಯಾವುದೇ ರಾಜಕೀಯ ಪಕ್ಷದ ಹೆಸರು ಬಿಂಬಿಸಬಾರದು. ಯಾವ ಸರ್ಕಾರವಾದರು ಕೆಲಸ ಮಾಡಲೆಬೇಕು. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವಧಿಯಲ್ಲಿ ಕಾಮಗಾರಿ ಮಾಡಿರಬಹುದು. ಅದಕ್ಕೆ ಅವರ ಹೆಸರಿಡುವಂತೆ ನಿರ್ದೇಶನ ನೀಡಿರುವುದು ಸರಿಯಲ್ಲ. ಚೌಡೇಶ್ವರಿ ದೇವಿ, ಶರಾವತಿ ನದಿ ಹೆಸರು ಇಡಬೇಕು. ಇಲ್ಲವೆ, ಜಿಲ್ಲೆಯಲ್ಲಿರುವ ನದಿ, ಪ್ರಸಿದ್ಧ ದೇವಾಲಯಗಳು ಹೆಸರಿಡಬೇಕು ಎಂದು ಪತ್ರಿಕಾ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT