ADVERTISEMENT

ಸವಾಲು ಎದುರಿಸಿ ಮುನ್ನುಗ್ಗಿ: ಸೋನು ಸೂದ್

ರಾಷ್ಟ್ರೀಯ ಮಹಿಳಾ ಉಡಾನ್ 2.0 ಸಮಾವೇಶ’ಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2025, 4:03 IST
Last Updated 2 ನವೆಂಬರ್ 2025, 4:03 IST
ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಜಿತೋ ಮಹಿಳಾ ಘಟಕದಿಂದ ಶನಿವಾರದಿಂದ ಆಯೋಜಿಸಿರುವ ‘ರಾಷ್ಟ್ರೀಯ ಮಹಿಳಾ ಉಡಾನ್ 2.0 ಸಮಾವೇಶ’ಕ್ಕೆ ಚಲನಚಿತ್ರ ಕಲಾವಿದರಾದ ಸಪ್ತಮಿ ಗೌಡ, ಡಾಲಿ ಧನಂಜಯ ಹಾಗೂ ಸೋನು ಸೂದ್ ಚಾಲನೆ ನೀಡಿದರು
ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಜಿತೋ ಮಹಿಳಾ ಘಟಕದಿಂದ ಶನಿವಾರದಿಂದ ಆಯೋಜಿಸಿರುವ ‘ರಾಷ್ಟ್ರೀಯ ಮಹಿಳಾ ಉಡಾನ್ 2.0 ಸಮಾವೇಶ’ಕ್ಕೆ ಚಲನಚಿತ್ರ ಕಲಾವಿದರಾದ ಸಪ್ತಮಿ ಗೌಡ, ಡಾಲಿ ಧನಂಜಯ ಹಾಗೂ ಸೋನು ಸೂದ್ ಚಾಲನೆ ನೀಡಿದರು   

ಮೈಸೂರು: ‘ಸವಾಲುಗಳನ್ನು ಎದುರಿಸಿ ಮುನ್ನುಗ್ಗುವ ಮೂಲಕ ಸಮಾಜಕ್ಕೆ ಕೊಡುಗೆ ನೀಡಬೇಕು’ ಎಂದು ಬಾಲಿವುಡ್ ನಟ ಸೋನು ಸೂದ್ ಹೇಳಿದರು. 

ಇಲ್ಲಿನ ಮಹಾರಾಜ ಕಾಲೇಜು ಮೈದಾನದಲ್ಲಿ ಜಿತೋ (ಜೈನ್‌ ಇಂಟರ್‌ನ್ಯಾಷನಲ್‌ ಟ್ರೇಡ್ ಆರ್ಗನೈಜೇಷನ್‌) ಮಹಿಳಾ ಘಟಕದಿಂದ ಆಯೋಜಿಸಲಾಗಿರುವ ಎರಡು ದಿನಗಳ ‘ರಾಷ್ಟ್ರೀಯ ಮಹಿಳಾ ಉಡಾನ್ 2.0 ಸಮಾವೇಶ’ದ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ರಸ್ತೆಗಳಲ್ಲಿನ ಸ್ಪೀಡ್‌ ಬ್ರೇಕರ್‌ಗಳಂತೆ ಸವಾಲುಗಳು ಎದುರಾಗುತ್ತವೆ. ಸಮಾಜದಲ್ಲಿ ಒಳ್ಳೆಯ ಕೆಲಸಗಳನ್ನು ಮಾಡಿದರೆ ಅವಮಾನ, ನಿಂದನೆ, ಮಾನಸಿಕವಾಗಿ ಕುಗ್ಗಿಸುವ ಮಾತುಗಳು ಸಹಜವಾಗಿಯೇ ಕೇಳಿಬರುತ್ತವೆ. ಅಂಥದ್ದಕ್ಕೆ ಕುಗ್ಗಬಾರದು. ಹೋರಾಟ ಮಾಡಿ ಗೆಲುವಿನ ಗುರಿ ಮುಟ್ಟಬೇಕು’ ಎಂದರು.

ADVERTISEMENT

‘ಕಷ್ಟದಲ್ಲಿ ಇರುವವರಿಗೆ ಮಾನವೀಯ ದೃಷ್ಟಿಯಲ್ಲಿ ಸೇವೆ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು‌‌. ಕೋವಿಡ್ ಕಾಲಘಟ್ಟದಲ್ಲಿ ಬಡವರ ಕಷ್ಟಗಳನ್ನು ನೋಡಿದಾಗ ನನ್ನ ಮನಸು ಕರಗಿ ಹೋಯಿತು‌‌. ಹೀಗಾಗಿ, ಸೇವಾ ಕಾರ್ಯ ಮಾಡಿದೆ’ ಎಂದು ತಿಳಿಸಿದರು.

‘ಜಿತೋ ಸಂಘಟನೆಯವರು ಜನಪ್ರತಿಧಿಗಳಂತೆ ಸಮಾಜ ಸೇವೆ ಮಾಡುತ್ತಿದ್ದಾರೆ. ಮಹಿಳಾ ನೌಕರರು ಪುರುಷರಿಗಿಂತ ಹೆಚ್ಚು ಕ್ರಿಯಾಶೀಲರಾಗಿದ್ದು, ಎಲ್ಲರಿಗೂ ಸ್ಫೂರ್ತಿಯಾಗಿದ್ದಾರೆ. ಅವರೇ ಸಮಾಜದ ನಿಜವಾದ ಹೀರೊಗಳು’ ಎಂದರು.

ಮೇಳದಲ್ಲಿ 150ಕ್ಕೂ ಹೆಚ್ಚು ಮಳಿಗೆಗಳಿದ್ದು, ಸೋನು ಸೂದ್, ಚಲನಚಿತ್ರ ನಟ ಡಾಲಿ ಧನಂಜಯ್ ಮತ್ತು ನಟಿ ಸಪ್ತಮಿ ಗೌಡ ಚಾಲನೆ ನೀಡಿದರು.

ಜಿತೋ ಮೈಸೂರು ಮಹಿಳಾ ವಿಭಾಗದ ಅಧ್ಯಕ್ಷೆ ಮೋನಾ ಭತೇವರ್, ಕಾರ್ಯದರ್ಶಿ ರಜನಿ ದಗಲಿಯಾ, ಕೆಕೆಜಿ ವಲಯದ ಅಧ್ಯಕ್ಷ ಪ್ರವೀಣ್ ಬಫ್ನ, ಕಾರ್ಯದರ್ಶಿ ದಿಲೀಪ್ ಜೈನ್, ಸಂಚಾಲಕಿ ಪಿಂಕಿ ಜೈನ್, ಜಿತೋ ಮೈಸೂರು ಘಟಕದ ಅಧ್ಯಕ್ಷ ವಿನೋದ್ ಬಲ್ಕಿವಾಲ್, ಕಾರ್ಯದರ್ಶಿ ಗೌತಮ್ ಸಲೇಚಾ, ಜಿತೋ ಮೈಸೂರು ಯುವ ವಿಭಾಗದ ಕಾರ್ಯದರ್ಶಿ ಸಿದ್ಧಾರ್ಥ್ ಕಟಾರಿಯಾ, ಕಾರ್ಯದರ್ಶಿ ಪುನೀತ್ ಜುಗರಾಜ್ ಪಾಲ್ಗೊಂಡಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.