ADVERTISEMENT

ಮೈಸೂರು: ಜ.19ರಂದು ವಿಶೇಷ ಮಕ್ಕಳಿಗೆ ಸಾಂಸ್ಕೃತಿಕ, ಕ್ರೀಡಾ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 17 ಜನವರಿ 2026, 11:58 IST
Last Updated 17 ಜನವರಿ 2026, 11:58 IST
   

ಮೈಸೂರು: ‘ಸಕ್ಷಮ– ಮೈಸೂರು ಸಂಸ್ಥೆ ವತಿಯಿಂದ ಆರೋಗ್ಯ ಭಾರತಿ ಮೈಸೂರು ಘಟಕದ ಸಹಯೋಗದಲ್ಲಿ ಜ.19ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 1.30ರವರೆಗೆ ಇಲವಾಲ ಸೆಂಟ್ ಜೋಸೆಫ್ ಸೆಂಟ್ರಲ್ ಸ್ಕೂಲ್ ಎದುರಿನ ವಿವೇಕ ಫಾರಂನಲ್ಲಿ ವಿಶೇಷ ಮಕ್ಕಳಿಗೆ ಸಾಂಸ್ಕೃತಿಕ, ಕ್ರೀಡಾ ಕಾರ್ಯಕ್ರಮ ಮತ್ತು ಸಾರ್ವಜನಿಕರಿಗೆ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ’ ಎಂದು ಸಕ್ಷಮ ಸಂಸ್ಥೆ ಅಧ್ಯಕ್ಷ ಜಯರಾಮ್ ತಿಳಿಸಿದರು.

ಇಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಗರದ ವಿವಿಧ ಶಾಲೆಗಳ 200 ವಿಶೇಷ ಮಕ್ಕಳು ಪಾಲ್ಗೊಳ್ಳಲಿದ್ದಾರೆ. ಅವರೊಂದಿಗೆ ಬರುವ ಪೋಷಕರು, ಶಿಕ್ಷಕರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಆರೋಗ್ಯ ತಪಾಸಣೆಯನ್ನು ಉಚಿತವಾಗಿ ಮಾಡಿಕೊಡಲಾಗುವುದು’ ಎಂದರು.

‌‘ಶಾಸಕ ಟಿ.ಎಸ್. ಶ್ರೀವತ್ಸ, ಜೀವಧಾರ ರಕ್ತ ನಿಧಿ ಕೇಂದ್ರದ ವ್ಯವಸ್ಥಾಪಕ ನಿರ್ದೇಶಕ ಎಸ್.ಈ. ಗಿರೀಶ್, ಡಾ.ಚಂದ್ರಶೇಖರ್, ಆರೋಗ್ಯ ಭಾರತಿ ಮೈಸೂರು ನಗರದ ಅಧ್ಯಕ್ಷ ಲಕ್ಷ್ಮೀನಾರಾಯಣ ಭಾಗವಹಿಸುವರು’ ಎಂದು ಹೇಳಿದರು.

ADVERTISEMENT

ಮಹೇಶ್, ಜಿ.ಎಂ. ಲಕ್ಷ್ಮೀನಾರಾಯಣ್, ಜಿ. ಗಣೇಶ್, ಜಿ. ಪ್ರವೀಣ್‌ಕುಮಾರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.