ಹುಣಸೂರು ತಾಲ್ಲೂಕಿನ ಹನಗೋಡು ಹೋಬಳಿ ಚಿಕ್ಕಹೆಜ್ಜೂರು ಎರಡನೇ ಹಾಡಿ ಸಮೀಪ ಬೀದಿ ನಾಯಿ ದಾಳಿಗೆ ಮೃತಪಟ್ಟ ಜಿಂಕೆ
ಹುಣಸೂರು: ಅರಣ್ಯದಂಚಿನ ಚಿಕ್ಕಹೆಜ್ಜೂರು ಹಾಡಿಯಲ್ಲಿ ಬೀದಿ ನಾಯಿ ದಾಳಿಗೆ 5 ರಿಂದ 6 ವರ್ಷದ ಚಿಂಕೆ ಮೃತಪಟ್ಟಿರುವ ಘಟನೆ ಶನಿವಾರ ನಡೆದಿದೆ.
ವೀರನಹೊಸಹಳ್ಳಿ ವಲಯದ ಅರಣ್ಯಕ್ಕೆ ಹೊಂದಿಕೊಂಡಿರುವ ಚಿಕ್ಕಹೆಜ್ಜೂರು ಹಾಡಿ ಎರಡನೇ ಹಾಡಿ ಸಮಿಪದ ಆನೆ ಕಂದಕದ ಬಳಿ ಬೆಳಂಬೆಳಗ್ಗೆ ಚಿಂಕೆ ಕಾಣಿಸಿಕೊಂಡಿದ್ದು, ಬೀದಿ ನಾಯಿ ಏಕಾಏಕಿ ದಾಳಿ ನಡೆಸಿದಾಗ ಜಿಂಕೆ ಆನೆ ಕಂದಕಕ್ಕೆ ಬಿದ್ದು ನಾಯಿ ದಾಳಿಯಿಂದ ಪಾರಾಗಲು ಸಾಧ್ಯವಾಗದೆ ಪ್ರಾಣ ಬಿಟ್ಟಿದೆ ಎಂದು ಚಿಕ್ಕಹೆಜ್ಜೂರಿನ ದೇವರಾಜ್ ತಿಳಿಸಿದ್ದಾರೆ.
6ನೇ ಪ್ರಕರಣ: ಚಿಕ್ಕಹೆಜ್ಜೂರು ಹಾಡಿ ಒಳಗೊಂಡಂತೆ ಅರಣ್ಯದಂಚಿನ ಗ್ರಾಮದಲ್ಲಿ ಆಕಸ್ಮಿಕವಾಗಿ ಕಾಣಿಸಿಕೊಳ್ಳುವ ವನ್ಯಪ್ರಾಣಿ ಜಿಂಕೆ ಮೇಲೆ ಬೀದಿ ನಾಯಿ ದಾಳಿ ನಡೆಸಿ ಬೇಟೆ ಆಡುತ್ತಿದ್ದು, ಈ ಪ್ರಕರಣ ಸೇರಿದಂತೆ ಈವರೆಗೆ 6 ಘಟನೆ ನಡೆದಿದೆ ಎಂದರು.
ಸ್ಥಳಕ್ಕೆ: ಅರಣ್ಯ ಇಲಾಖೆ ಸಿಬ್ಬಂದಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಬೀದಿ ನಾಯಿ ದಾಳಿಗೆ ಪ್ರಾಣ ಬಿಟ್ಟ ಚಿಂಕೆಯನ್ನು ವಶಕ್ಕೆ ಪಡೆದು ಮಹಜರ್ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.