
ಪಿರಿಯಾಪಟ್ಟಣ ತಾಲ್ಲೂಕಿನ ಮಾಲಂಗಿ ಗ್ರಾಮದಲ್ಲಿ ಏರ್ಪಡಿಸಿದ್ದ ಹಿಂದೂ ಸಮಾಜ್ಯೋತ್ಸವ ಕಾರ್ಯಕ್ರಮದಲ್ಲಿ ಗುಣಚಂದ್ರ ಕುಮಾರ್ ಮಾತನಾಡಿದರು.
ಪಿರಿಯಾಪಟ್ಟಣ: ಸ್ವದೇಶಿ ಪ್ರೇಮ ಮತ್ತು ನಾಗರಿಕ ಸಂಸ್ಕೃತಿ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಧಾರ್ಮಿಕ ಪ್ರವಾಚಕ ಗುಣಚಂದ್ರ ಕುಮಾರ್ ತಿಳಿಸಿದರು.
ತಾಲ್ಲೂಕಿನ ಮಾಲಂಗಿ ಗ್ರಾಮದಲ್ಲಿ ಏರ್ಪಡಿಸಿದ್ದ ಹಿಂದೂ ಸಮಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ನಮ್ಮ ಹಿಂದೂ ಸಮಾಜಕ್ಕೆ ಸಾವಿರಾರು ವರ್ಷಗಳ ಇತಿಹಾಸ ಇದೆ, ನಾವುಗಳು ಇದನ್ನು ಉಳಿಸಬೇಕು. ಧರ್ಮದ ಉಳಿವಿಗಾಗಿ ಶ್ರಮಿಸಬೇಕು. ಇವತ್ತಿನ ಕಾರ್ಯಕ್ರಮವು ಒಂದು ಸಮಾಜವನ್ನು ಕಟ್ಟುವ, ಒಂದು ಸುಭದ್ರ ಭಾರತವನ್ನು ಕಟ್ಟುವ ಕಾರ್ಯವಾಗಿದೆ ಎಂದರು. ನಮ್ಮ ನಡವಳಿಕೆಗಳು ಬದಲಾಯಿಸಿಕೊಂಡಾಗ ಮಾತ್ರ ನಮ್ಮ ದೇಶದ ಗತವೈಭವವನ್ನು ಉಳಿಸಲು ಸಾಧ್ಯ ಎಂದರು.
ವಿಭಾಗ ಬೌದ್ಧಿಕ ಪ್ರಚಾರಕ್ ಮಹೇಂದ್ರ ಮಾತನಾಡಿ, ಪ್ರತಿಯೊಬ್ಬರಲ್ಲಿಯೂ ಹಿಂದೂ ಸಾಮ್ರಾಜ್ಯೋತ್ಸವದ ಕಲ್ಪನೆ ಮತ್ತು ಉದ್ದೇಶವಿದೆ, ಆದರೆ ಇದನ್ನು ಸಾಧಿಸುವ ಗುರಿ ಹೊಂದಬೇಕು. ಇದಕ್ಕಾಗಿ ಸಂಘವು ಪಂಚ ಪರಿವರ್ತನೆಗಳ ಸಿದ್ಧಾಂತವನ್ನು ಸಮಾಜಕ್ಕೆ ಸಾರುತ್ತಿದೆ. ಇವುಗಳನ್ನು ಮೈಗೂಡಿಕೊಂಡಾಗ ಮಾತ್ರ ನಮ್ಮ ಹಿಂದೂ ಸಾಮ್ರಾಜ್ಯೋತ್ಸವಕ್ಕೆ ಸಾರ್ಥಕತೆ ಬರುತ್ತದೆ ಎಂದರು.
ಹಿಂದೂ ಸಮಾಜೋತ್ಸವ ಆಯೋಜನೆ ಸಮಿತಿ ಅಧ್ಯಕ್ಷ ವಕೀಲ ಎಂ.ಸಿ.ಹರೀಶ್, ಕಾರ್ಯಕ್ರಮ ಅಧ್ಯಕ್ಷ ಎಚ್.ಸಿ.ದೇವೇಂದ್ರ, ಪ್ರಮುಖರಾದ ಯಾದವಾಚರ್, ಮಂಜು ಕೋಗಿಲವಾಡಿ, ಸಚ್ಚಿದಾನಂದ, ಲಕ್ಷ್ಮೀಗೌಡ, ತಮ್ಮನಾಯಕ, ಚಂದ್ರೆಗೌಡ, ಶಿವಣ್ಣ, ಕೆ.ಪಿ.ರಾಜು, ಹರೀಶ್, ಲೋಕಪಾಲಯ್ಯ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.