
ತಿ.ನರಸೀಪುರ: ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಮತ್ತು ‘ವಿಬಿ- ಜಿ ರಾಮ್ ಜಿ’ ಯೋಜನೆ ವಿರೋಧಿಸಿ, ಸಮಾನ ಮನಸ್ಕರು, ಪ್ರಗತಿಪರ ಸಂಘಟನೆಗಳ ಜೊತೆಗೂಡಿ ಮೈಸೂರಿನಲ್ಲಿ ಜನ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ನಡೆಸುವ ನಿರ್ಣಯವನ್ನು ಮಂಗಳವಾರ ದಸಂಸ ಜಿಲ್ಲಾ ಸಮಿತಿ ಕೈಗೊಂಡಿತು.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ದಸಂಸ ಜಿಲ್ಲಾ ಸಂಚಾಲಕ ಬೆಟ್ಟಯ್ಯಕೋಟೆ ಅವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಸಮಿತಿ ಮುಖಂಡರ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಯಿತು. ಜೊತೆಗೆ ಸಮಿತಿಯ ಸಂಪೂರ್ಣ ಸಂಘಟನೆ ಬಗ್ಗೆ ಚರ್ಚಿಸಲಾಯಿತು.
ಜಿಲ್ಲೆಯಾದ್ಯಂತ ಎಲ್ಲಾ ತಾಲ್ಲೂಕುಗಳಲ್ಲಿನ ಗಂಭೀರ ಭೂ ಸಮಸ್ಯೆಗಳು, ದಲಿತರು ಮತ್ತು ಬಡಜನರ ಸಾಮುದಾಯಿಕ ಸಮಸ್ಯೆಗಳ ಬಗ್ಗೆ 2 ದಿನದೊಳಗೆ ತಿಳಿಸಿದರೆ, ಆ ಸಮಸ್ಯೆಗಳ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಡಳಿತದ ಗಮನಕ್ಕೆ ತಂದು ಸುಲಭ ಪರಿಹಾರಕ್ಕೆ ಪ್ರಯತ್ನಿಸುವ ಬಗ್ಗೆ ಚರ್ಚಿಸಿ ನಿರ್ಣಯಿಸಲಾಯಿತು.
ಸಭೆಯಲ್ಲಿ ದಸಂಸ ಜಿಲ್ಲಾ ಸಂಚಾಲಕರಾದ ಆಲಗೂಡು ಶಿವಕುಮಾರ್, ಜಿಲ್ಲಾ ಸಂಘಟನಾ ಸಂಚಾಲಕರಾದ ಶಂಭುಲಿಂಗಸ್ವಾಮಿ, ಹೆಗ್ಗನೂರು ನಿಂಗರಾಜು, ಖಜಾಂಚಿ ಬಿ.ಡಿ. ಶಿವಬುದ್ದಿ, ಉಪ ವಿಭಾಗೀಯ ಸಂಚಾಲಕರಾದ ಮಂಜು ಶಂಕರಪುರ, ಗೌರಿಪುರ ವೆಂಕಟೇಶ್, ಕೃಷ್ಣಮೂರ್ತಿ ಬಸವಟ್ಟಿಗೆ, ತಾಲ್ಲೂಕು ಸಂಚಾಲಕರಾದ ಹೊಮ್ಮರಗಳ್ಳಿ ಸಿದ್ದರಾಜು, ಯಾಚೇನಹಳ್ಳಿ ಸೋಮಶೇಖರ್, ಮುತ್ತು ಉಯ್ಯಂಬಳ್ಳಿ, ಮಲಾರ ಮಹೇಶ್, ಅತ್ತಿಕುಪ್ಪೆರಾಮಕೃಷ್ಣ, ಸಿದ್ದೇಶ್, ಸಿದ್ದೇಗೌಡನಹುಂಡಿ ಸುರೇಶ್, ಕುಪ್ಪೇಗಾಲ ಸೋಮಣ್ಣ, ಆಲಗೂಡು ನಾಗರಾಜಮೂರ್ತಿ, ಕಿರಗಸೂರು ರಜನಿ, ಬನ್ನಹಳ್ಳಿಹುಂಡಿ ಉಮೇಶ್, ಕರೋಹಟ್ಟಿ ನಾಗೇಶ್, ಮಹದೇವ, ಲಕ್ಷಣ್, ದಾಸಯ್ಯ ಹೊಳೆಹುಂಡಿ, ಶಿರಮಳ್ಳಿ ರಾಜಶೇಖರ್, ಕಾಳಸ್ವಾಮಿ, ಪುಟ್ಟಯ್ಯ, ಅಂಕಯ್ಯ, ಶಿವರಾಜು, ಹೊಳೆಯಪ್ಪ, ಮರಿಸ್ವಾಮಿ, ಜಯಮಲ್ಲೇಶ, ಶಿವಮೂರ್ತಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.