ತಲಕಾಡು: ಸೋಮವಾರ ಮತ್ತು ಮಂಗಳವಾರ ರಾತ್ರಿ ಸುರಿದ ಮಳೆಗೆ ಗ್ರಾಮ ಪಂಚಾಯಿತಿಯ 3ನೇ ವಾರ್ಡ್‌ನ ನಿವಾಸಿ ರತ್ನಮ್ಮ ವೆಂಕಟರಾಜು ಎಂಬುವರ ಮನೆ ಗೋಡೆ ಬುಧವಾರ ಕುಸಿದಿದೆ.
ಮನೆ ಗೋಡೆ ಕುಸಿತದಿಂದ ಯಾವುದೇ ಹಾನಿ ಸಂಭವಿಸಿಲ್ಲ, ಸ್ಥಳಕ್ಕೆ ಪಿಡಿಒ ಟಿ.ಎಂ. ಮಹೇಶ್ ಗುರುವಾರ ಭೇಟಿ ನೀಡಿ ಪರಿಶೀಲಿಸಿದರು.
‘ಮನೆಗೆ ಹಾನಿಯಾಗಿ ಬಹಳ ತೊಂದರೆಯಾಗಿದೆ, ಹೊಸದಾಗಿ ಕಟ್ಟಿಕೊಳ್ಳಲು ಲಕ್ಷಾಂತರ ರೂಪಾಯಿ ಹಣವಿಲ್ಲ’ ಎಂದು ರತ್ನಮ್ಮ ಅಳಲು ತೋಡಿಕೊಂಡರು.
‘ಮನೆ ಕಳೆದುಕೊಂಡವರಿಗೆ ಸೂಕ್ತ ಪರಿಹಾರ ಸಿಗಲಿದೆ, ಮನೆ ಹಾನಿ ಬಗ್ಗೆ ವರದಿ ಕಳುಹಿಸಿ, ಕ್ರಮ ಕೈಗೊಳ್ಳಲಾಗುವುದು’ ಎಂದು ಪಿಡಿಒ ಮಹೇಶ್ ಹೇಳಿದರು.
ವಾರ್ಡ್ ಸದಸ್ಯರಾದ ಕುಮಾರ್ ನಾಯಕ್, ನೌಶಾದ್ ಪಾಶ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.