ADVERTISEMENT

ದೋಸ್ತಿಗಳ ನಡುವೆ ‘ಕುಸ್ತಿ’: ದಸರಾ ಅವ್ಯವಸ್ಥೆ ತನಿಖೆಗೆ ತನ್ವೀರ್‌ ಸೇಠ್‌ ಆಗ್ರಹ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2018, 9:49 IST
Last Updated 20 ಅಕ್ಟೋಬರ್ 2018, 9:49 IST
   

ಮೈಸೂರು: ದಸರಾ ಉತ್ಸವದ ಬೆನ್ನಲ್ಲೇ ಮೈಸೂರಿನಲ್ಲಿ ಕಾಂಗ್ರೆಸ್‌–ಜೆಡಿಎಸ್‌ ನಡುವೆ ಭಿನ್ನಾಭಿಪ್ರಾಯ ತಲೆದೋರಿದೆ. ದಸರಾ ಕಾರ್ಯಕ್ರಮಗಳಿಂದ ಅಂತರ ಕಾಯ್ದುಕೊಂಡಿದ್ದ ಕಾಂಗ್ರೆಸ್‌ನ ಸ್ಥಳೀಯ ಮುಖಂಡರು ಶನಿವಾರ ಸುದ್ದಿಗೋಷ್ಠಿ ನಡೆಸಿ ಜೆಡಿಎಸ್ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದರು.

ಜಿಲ್ಲಾಡಳಿತ ಜವಾಬ್ದಾರಿ ಮರೆತು ಕೆಲಸ ಮಾಡಿದೆ. ಜಿಲ್ಲಾಧಿಕಾರಿ ಮತ್ತು ಅವರ ತಂಡದವರು ಜೆಡಿಎಸ್‌ ನಾಯಕರ ಕೈಗೊಂಬೆಯಂತೆ ವರ್ತಿಸಿದ್ದಾರೆ. ದಸರಾ ಪಾಸ್‌ ಹಂಚಿಕೆ, ಕಾರ್ಯಕ್ರಮಗಳ ಆಯೋಜನೆಯಲ್ಲಿ ಲೋಪಗಳು ಉಂಟಾಗಿದ್ದು, ಈ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಶಾಸಕ ತನ್ವೀರ್‌ ಸೇಠ್ ಆಗ್ರಹಿಸಿದರು.

ಪಾಸ್‌ ಹಂಚಿಕೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಮತ್ತು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್‌ ಅವರ ದರ್ಬಾರ್‌ ನಡೆದಿದೆ ಎಂದು ದೂರಿದರು.

ADVERTISEMENT

ದಸರಾ ಉತ್ಸವ ಜನರ ದುಡ್ಡಿನಿಂದ ನಡೆಯುತ್ತದೆ. ಆದರೆ ಸ್ವಂತ ಖರ್ಚಿನಿಂದ ಉತ್ಸವ ಮಾಡಿದಂತೆ ವರ್ತಿಸಿದ್ದಾರೆ. ನಾಡಹಬ್ಬವನ್ನು ತೋಚಿದಂತೆ ಮಾಡಲು ಇದು ಅವರ ಮನೆ ಜಾತ್ರೆ ಅಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಹರಿಹಾಯ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.